ಬದಿಯಡ್ಕ: ರಕ್ತ ಸಂಬಂಧದ ಬಾಲಕಿಯ ಅತ್ಯಾಚಾರಗೈದು ಗರ್ಭಿಣಿಯಾಗಿಸಿ ಹೆರಿಗೆಯ ನಂತರ ಮಗುವನ್ನು ಅನಾಥಾಲಯಕ್ಕೆ ನೀಡಲು ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದೆ. ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ನಾರಂಪಾಡಿ ಬಳಿಯ ನಿವಾಸಿ ಬಂಧಿತ ಆರೋಪಿಯಾಗಿದ್ದಾನೆ. ಈತ ಅತ್ಯಾಚಾರಕ್ಕೀಡಾದ ಬಾಲಕಿಯ ಹತ್ತಿರ ಸಂಬಂಧಿಯಾದ ಕಾರಣ ಈತನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಮೂರು ಮಕ್ಕಳ ತಂದೆಯಾದ ಆರೋಪಿ, ಪ್ಲಸ್ ಟೂ ನಂತರ ಮನೆಯಲ್ಲೇ ಇದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದನು. ಬಾಲಕಿಗೆ ಅತಿಯಾದ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿ ಎಂದು ತಿಳಿಯಿತು. ಅನಂತರ ಕಾಞಂಗಾಡ್ ಖಾಸಗಿ ಆಸ್ಪತ್ರೆಯಲ್ಲಿ 19 ವರ್ಷ ಎಂದು ಸುಳ್ಳು ಹೇಳಿ ಹೆರಿಗೆ ನಡೆಸಲಾಯಿತು. ಗಂಡು ಮಗುವಿಗೆ ಜನ್ಮ ನೀಡಿದ ಬಾಲಕಿ ಹಾಗೂ ಆಕೆಯ ತಾಯಿಯನ್ನು ಬೇಕಲ ಬಳಿಯ ಬಾಡಿಗೆ ಮನೆಯೊಂದರಲ್ಲಿ ಇರಿಸಲಾಯಿತು. ಈ ಮದ್ಯೆ ಮಗುವನ್ನು ತಲಶೇರಿಯ ಅನಾಥ ಮಂದಿರಕ್ಕೆ ನೀಡಲು ಯತ್ನ ನಡೆಸಲಾಯಿತು. ಅನಾಥ ಮಂದಿರದ ಅಧಿಕೃತರು ಸಂಶಯಗೊಂಡು ಈ ಮಾಹಿತಿಯನ್ನು ಚೈಲ್ಡ್ ಲೈನಿಗೂ ಪೊಲೀಸರಿಗೂ ನೀಡಿದರು. ಪೊಲೀಸರು ತನಿಖೆ ನಡೆಸಿ ಕೇಸು ದಾಖಲಿಸಿ ಪ್ರಕರಣವನ್ನು ಬದಿಯಡ್ಕ ಪೊಲೀಸರಿಗೆ ಹಸ್ತಾಂತರಿಸಿದರು. ಅದರಂತೆ ಆರೋಪಿಯ ಬಂಧನ ನಡೆದಿದೆ
0 Comments