ಮುಳ್ಳೇರಿಯ: ದೇಶಿಯ ಅಧ್ಯಾಪಕ ಪರಿಷತ್ ಕುಂಬಳೆ ಉಪಜಿಲ್ಲಾ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಶ್ಯಾಮಲಾ ರವಿರಾಜ್ ಅವರ ಗೌರಿಯಡ್ಕದ ನಿವಾಸದಲ್ಲಿ ಆಚರಿಸಲಾಯಿತು. ಕುಂಬಳೆ ಉಪಜಿಲ್ಲಾ ಅಧ್ಯಕ್ಷ ರಾಮಚಂದ್ರ  ಕಾರಡ್ಕ ಇವರು ಸಭೆಯ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀವಿಷ್ಣು ಭಟ್ ಎಡಪ್ಪಾಡಿ ನಿರ್ವಹಿಸಿದರು. ರಾಜ್ಯ ಉಪಾಧಕ್ಷ ಪ್ರಭಾಕರ್ ಅವರು ಶುಭ ಕೋರಿದರು. ಸಭೆಯಲ್ಲಿ   ಪುಷ್ಪ, ರವಿರಾಜ್, ಪುರುಷೋತ್ತಮ ಕುಲಾಲ್ ಹಾಗೂ ದೇಶೀಯ ಅಧ್ಯಾಪಕ ಪರಿಷತ್ತಿನ  ಇನ್ನಿತರ ಸದಸ್ಯರು ಉಪಸ್ಥಿತರಿದ್ದರು. ಶ್ಯಾಮಲಾ ಕುಮಾರಿ ಸ್ವಾಗತಿಸಿ, ದಿನೇಶ್  ವಂದಿಸಿದರು.