ಕಾಸರಗೋಡು : ಜಿಯುಪಿ ಶಾಲೆ ಮೊಗ್ರಾಲ್ ಪುತ್ತೂರು ಶತಮಾನೋತ್ಸವ ಸಂಭ್ರಮಾಚರಣೆಯ 'ಉಜಿರ ಪ್ರಭೆ' ಎಂಬ ವಿಭಿನ್ನ ಕಾರ್ಯಕ್ರಮ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಎಂ ಇವರ 'ಅಮ್ಮ ತೊಟ್ಟಿಲು' ಕವನ ಸಂಕಲನವನ್ನು ಶಾಲಾ ಶತಮಾನೋತ್ಸವ ವೇದಿಕೆಯಲ್ಲಿ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಅಬ್ದುಲ್ಲ ಕುಂಞಿ ಬಿಡುಗಡೆ ಮಾಡಿದರು.
ಇವರನ್ನು ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.


0 Comments