ಆನೆಕಲ್ಲು: ಎ.ಯು.ಪಿ. ಶಾಲೆ ಆನೆಕಲ್ಲು ಇದರ ವಾರ್ಷಿಕೋತ್ಸವ ಹಾಗೂ ಶಾಲಾ ಮುಖ್ಯ ಶಿಕ್ಷಕಿಗೆ ಬೀಳ್ಕೊಡುಗೆ ಸಮಾರಂಭ ಫೆ. 17 ಮಂಗಳವಾರ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜರಗಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಅಹಮ್ಮದ್ ಮಾಸ್ಟರ್ ಆನೆಕಲ್ಲು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ , "ಶಾಲಾ ವಾರ್ಷಿಕೋತ್ಸವದ ಮೂಲಕ ಮಕ್ಕಳ ಸೃಜನಾತ್ಮಕ ಚಟುವಟಿಕೆಗೆ ವೇದಿಕೆಯನ್ನು ಒದಗಿಸುವಂತಾಗುತ್ತದೆ. ಜೊತೆಗೆ ರಕ್ಷಕರಿಗೆ, ಹಳೆವಿದ್ಯಾರ್ಥಿಗಳಿಗೆ  ಶಾಲೆಯ ಮೇಲೆ ಒಳ್ಳೆಯ ಬಾಂಧವ್ಯವನ್ನು ಉಂಟುಮಾಡುತ್ತದೆ" ಎಂದು ತಿಳಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರಶಾಂತ್ ಬಗಂಬಿಲರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಾಜಿ ಪಿಟಿಎ ಅಧ್ಯಕ್ಷರಾದ ಉಮರಬ್ಬ ಆನೆಕಲ್ಲು, ಅಶ್ರಫ್ ಆನೆಕಲ್ಲು,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನ್ವರ್ ಆನೆಕಲ್ಲು, ಸತ್ಯ ಪ್ರಕಾಶ್ ಆನೆಕಲ್ಲು, ಉಪಾಧ್ಯಕ್ಷರಾದ ಅಶೋಕ್ ಕೊಡ್ಲಮೊಗರು, ಮುರಳಿ ಶ್ಯಾಂ ಮಾಸ್ತರ್, ಅಬ್ದುಲ್ ಖಾದರ್, ಎಂ ಪಿ ಟಿ ಎ ಅಧ್ಯಕ್ಷೆ ಶೋಭಾ ಕತ್ತೆರಿಕೋಡಿ, ಉಪಾಧ್ಯಕ್ಷೆ ಭವ್ಯಶ್ರೀ, ಪಿ ಟಿ ಎ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ರವಿಶಂಕರ್ ಸ್ವಾಗತಿಸಿ, ಸಂತೋಷ್ ಮಾಸ್ಟರ್ ವಂದಿಸಿದರು.