Ticker

6/recent/ticker-posts

Ad Code

ಹಾಲಿನ ಬೆಲೆಯನ್ನು ಲೀಟರ್‌ಗೆ 4 ರೂ. ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯ


ತಿರುವನಂತಪುರ : ಮಿಲ್ಮಾ ಹಾಲಿನ ಬೆಲೆಯನ್ನು ಲೀಟರ್‌ಗೆ 4 ರೂ. ಹೆಚ್ಚಿಸುವಂತೆ ಒತ್ತಾಯಿಸಿದ್ದು ಸರ್ಕಾರದ ಅನುಮೋದನೆ ಕಾಯುತ್ತಿದೆ. ಸರ್ಕಾರದ ಅನುಮೋದನೆ ದೊರೆತ ತಕ್ಷಣ ಮಿಲ್ಮಾ ಹಾಲಿನ ಬೆಲೆಯನ್ನು ಹೆಚ್ಚಿಸಲಿದ್ದು ಹಾಲಿನ ಬೆಲೆ ಏರಿಕೆಯನ್ನು ಅಧ್ಯಯನ ಮಾಡಲು ರಚಿಸಲಾದ ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಮಿಲ್ಮಾ ಈ ನಿರ್ಧಾರ ತೆಗೆದುಕೊಳ್ಳಲಿದೆ. ಮಿಲ್ಮಾ ಆಗ್ರಹಿಸಿದರೆ ಸರ್ಕಾರ ಹಾಲಿನ ಬೆಲೆಯನ್ನು ಹೆಚ್ಚಿಸುವ ಬಗ್ಗೆ ಪರಿಗಣಿಸುವುದಾಗಿ ಸಚಿವ ಜೆ. ಚಿಂಜುರಾಣಿ  ಈ ಹಿಂದೆ ತಿಳಿಸಿದ್ದರು. ಇದರಂತೆ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಹಾಲಿನ ಬೆಲೆಯನ್ನು ಹೆಚ್ಚಿಸುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗುತ್ತದೆ ಎಂದು ಸರ್ಕಾರದ ಅಂದಾಜಿಸಿದ್ದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಸಚಿವ ಚಿಂಜುರಾಣಿಗೆ ಈ ಬಗ್ಗೆ ಸ್ಪಷ್ಟಪಡಿಸಿದ್ದರು. ಈ ಸಂದರ್ಭದಲ್ಲಿಯೇ ಹಾಲು ಉತ್ಪಾದಕರಿಗೆ ಸಹಾಯ ಮಾಡುವ ನೆಪದೊಂದಿಗೆ ಬೆಲೆಯನ್ನು ಹೆಚ್ಚಿಸಲು ಮಿಲ್ಮಾ ಕ್ರಮ ಕೈಗೊಳ್ಳಲು  ತಿಂಗಳುಗಳಿಂದ ಚರ್ಚೆಗಳು ನಡೆಯುತ್ತಿವೆ. ಜಿ.ಎಸ್.ಟಿಯನ್ನು ತೆಗೆದುಹಾಕಿದ ಸಂದರ್ಭದಲ್ಲಿ, ನಿರ್ದೇಶಕರ ಮಂಡಳಿಯು ಸೆಪ್ಟೆಂಬರ್‌ನಲ್ಲಿ ಸದ್ಯಕ್ಕೆ ಬೆಲೆ ಏರಿಕೆ ಮಾಡಬಾರದು ಎಂದು ನಿರ್ಧರಿಸಿತು. ನಂತರ, ಸ್ಥಳೀಯಾಡಳಿತ ಚುನಾವಣೆಯ ನಂತರ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಲಾಯಿತು. ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮೂರು ಮಿಲ್ಮಾ ಒಕ್ಕೂಟಗಳು ವಿಭಿನ್ನ ಶಿಫಾರಸುಗಳನ್ನು ಸಲ್ಲಿಸಿದೆ.

Post a Comment

0 Comments