ಕಾಸರಗೋಡು : ಸುದೀರ್ಘ ಕಾಲ ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ರಾಧಾಕೃಷ್ಣ ಅಡಿಗ(80) ನಿಧನರಾದರು. ಮಂಗಳವಾರ ಮಧ್ಯಾಹ್ನ ವಯೋಸಹಜವಾಗಿ ಅವರು ಕೊನೆಯುಸಿರೆಳೆದರು.
ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಮೂರು ದಶಕಕ್ಕೂ ಅಧಿಕ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದಲ್ಲದೇ ಕಾಸರಗೋಡು ಪೇಟೆ ಪರಿಸರದಲ್ಲಿ ವೈದಿಕ ಪೂಜಾ ಕೈಂಕರ್ಯ ನಿರತರಾಗಿಯೂ ಪ್ರಸಿದ್ಧರಾಗಿದ್ದಾರೆ. ಇವರ ಪುತ್ರ ಶಂಕರ ನಾರಾಯಣ ಅಡಿಗ ಮಸ್ಕತ್ ಶಿವ ದೇವಾಲಯದ ಪ್ರಧಾನ ಅರ್ಚಕರಾಗಿದ್ದಾರೆ.
ಮೃತರು ಪತ್ನಿ ಶಾಂತಿ, ಮಗಳು ಪೂರ್ಣಿಮ(ಮಧೂರು), ಭಾವ ಬ್ರಹ್ಮವಾಹಕ ಹರಿನಾರಾಯಣ ಮಯ್ಯ ಸೇರಿದಂತೆ ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

0 Comments