ಕುಂಬಳೆ : ಇತಿಹಾಸ ಪ್ರಸಿದ್ಧ ಪ್ರಕೃತಿ ರಮಣೀಯ ತಟಾಕ ಕ್ಷೇತ್ರ ಅನಂತಪುರ ದೇವಸ್ಥಾನದ ಪಾವಿತ್ರ್ಯತೆಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವ ಕಾರ್ಖಾನೆಗಳಿಂದ ಹೊರಡುವಂತಹ ದುರ್ವಾಸನೆ ವಿರುದ್ಧ ಹೋರಾಟ ನಡೆಸುವ ಬಗ್ಗೆ ಚರ್ಚಿಸಲು ಅನಂತಪುರ ದೇವಸ್ಥಾನದಲ್ಲಿ ಹಿಂದೂ ಸಂಘಟನೆ ಗಳ ಪ್ರಮುಖರ ಸಭೆಯು ನಡೆಯಿತು. ಸ್ಥಳೀಯ ಹಿಂದೂ ಸಂಘಟನಾ ಕಾರ್ಯಕರ್ತರು, ಸಂಘ ಸಂಸ್ಥೆಯ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯಮಂಡಿಸಿದರು.
ಹಿಂದೂ ಐಕ್ಯವೇದಿಯ ಜಿಲ್ಲಾಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರು, ಮಂಜೇಶ್ವರ ತಾಲೂಕು ಸಂಚಾಲಕ ಗಿರಿ ವೀರನಗರ್, ಸಂದೀಪ್ ಗಟ್ಟಿ, ವಸಂತಿ ಕೃಷ್ಣ, ಬಿಜೆಪಿ ನೇತಾರ ವಿಕ್ರಂ ಪೈ ಕುಂಬಳೆ, ಸುನಿಲ್ ಅನಂತಪುರ, ಬಾಬು ಮಾಸ್ತರ್ ಅನಂತಪುರ, ಅಜೇಯ್ ನಾಯ್ಕಾಪು, ಸುರೇಶ್ ಶಾಂತಿಪ್ಪಳ್ಳ, ಅಜಿತಾ ಟೀಚರ್ ಮೊದಲಾದವರು ಪಾಲ್ಗೊಂಡಿದ್ದರು. ಕ್ಷೇತ್ರಕ್ಕೆ ಮಾರಕವಾಗುವ ಪ್ರತಿಯೊಂದು ಚಟುವಟಿಕೆಗಳನ್ನು ಕಾನೂನು ರೀತಿಯಲ್ಲಿ ನಿಗ್ರಹಿಸಲು ಸಭೆ ಒಕ್ಕೊರಳ ತೀರ್ಮಾನ ಕೈಗೊಂಡಿದೆ.

0 Comments