ಕಾಸರಗೋಡು: ಕಳೆದ ಮೂರು ವಾರಗಳಲ್ಲಿ ಕಾಸರಗೋಡು ಜಿಲ್ಲೆಯ ಮಾರುಕಟ್ಟೆಯಲ್ಲಿ ಕೋಳಿ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಪ್ರಸ್ತುತ ಜಿಲ್ಲೆಯಲ್ಲಿ ಬ್ರೊಯಿಲರ್ ಕೋಳಿಯ ಬೆಲೆ ಪ್ರತಿ ಕೆ.ಜಿಗೆ ರೂ144ರಿಂದ 140 ಹಾಗೂ ಟೈಸನ್ ಕೋಳಿ ಮಾಂಸದ ಬೆಲೆ ರೂ.264ರಿಂದ ರೂ 240 ಆಗಿದೆ.
ಕಳೆದ ತಿಂಗಳು ಬೆಲೆ 155ರಿಂದ 180ಕ್ಕೆ ಏರಿಕೆಯಾಗಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಜುಲೈನಲ್ಲಿ ರೂ.140, ಜೂನ್‌ನಲ್ಲಿ ರೂ120 ಹಾಗೂ ಏಪ್ರಿಲ್‌ನಲ್ಲಿ ರೂ.110 ಇತ್ತು. ಕರ್ನಾಟಕ ಮತ್ತು ತಮಿಳುನಾಡಿನ ಮಾರುಕಟ್ಟೆ ದರವನ್ನು ಆಧರಿಸಿ ಕೇರಳದಲ್ಲಿ ಕೋಳಿ ಬೆಲೆ ನಿಗದಿಯಾಗುತ್ತದೆ.
ಆದರೆ ಕಳೆದ ಮೂರು ತಿಂಗಳಲ್ಲಿ 50 ಕೆ.ಜಿ. ಕೋಳಿ ಆಹಾರದ ಬೆಲೆ ಸುಮಾರು ರೂ.400ಗೆ ಏರಿಕೆಯಾದ ಕಾರಣ ಉತ್ಪಾದನಾ ವೆಚ್ಚ ಹೆಚ್ಚಿದ್ದು, ಉತ್ಪಾದನೆಯೂ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೀನು ಪೂರೈಕೆ ಅಧಿಕವಾಗಿರುವುದರಿಂದ ಕೋಳಿ ಮಾರುಕಟ್ಟೆ ಬೆಲೆ ಯಲ್ಲಿ ಹೊಡೆತವುಂಟಾಗಿದೆ. ಬೂತಾಯಿ, ಬಂಗುಡೆ ಹಾಗೂ ನತ್ತೋಲಿ ಮೀನುಗಳ ಪೂರೈಕೆ ಹೆಚ್ಚಾಗಿರುವುದರಿಂದ ಕೋಳಿ ಮತ್ತು ಮಾಂಸದ ಬೇಡಿಕೆ ಕುಸಿದಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಆದರೆ ಮೀನು ಬೆಲೆಯಲ್ಲಿ ಹೆಚ್ಚಿನ ಇಳಿಕೆ ಕಂಡುಬಂದಿಲ್ಲ. ಮುಂದೆ ಓಣಂ ಹಬ್ಬದ ಸಂದರ್ಭದಲ್ಲಿ ಕೋಳಿ ಮಾಂಸ ಹಾಗೂ ತರಕಾರಿ ಪದಾರ್ಥಗಳ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments