Ticker

6/recent/ticker-posts

ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಎಸೆಯಲ್ಪಟ್ಟ ಮಾನ್ಯ ನಿವಾಸಿ ಇನ್ನೊಂದು‌ ಕಾರು ಡಿಕ್ಕಿ ಹೊಡೆದು‌ ಮೃತ್ಯು


 ನೀರ್ಚಾಲು: ರಸ್ತೆ ಅಡ್ಡ ದಾಟುವ ವೇಳೆ ಕಾರು ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ವ್ಯಕ್ತಿ ಇನ್ನೊಂದು‌ಕಾರು ಡಿಕ್ಕಿ ಹೊಡೆದು  ಮೃತಪಟ್ಟ ಘಟನೆ ‌ನಡೆದಿದೆ. ಮಾನ್ಯ ಕಡವು ನಿವಾಸಿ ದಿವಂಗತ ಕೃಷ್ಣಯ್ಯ ಶೆಟ್ಟಿ- ಲಕ್ಷ್ಮಿ ದಂಪತಿಯ ಪುತ್ರ ಗೋಪಾಲ ಶೆಟ್ಟಿ(60) ಮೃತಪಟ್ಟ ದುರ್ದೈವಿ. ನಿನ್ನೆ (ಶನಿವಾರ) ರಾತ್ರಿ 8.30 ರ ವೇಳೆ ಬೇಳ ವಿ.ಎಂ.ನಗರದಲ್ಲಿ ಈ ಅಫಘಾತ ನಡೆದಿದೆ. ಗೋಪಾಲ ಶೆಟ್ಟಿ ರಸ್ತೆ ದಾಟುತ್ತಿದ್ದ ವೇಳೆ ಅಮಿತ ವೇಗದಿಂದಲೂ ಅಜಾಗರೂಕತೆಯಿಂದಲೂ ಬದಿಯಡ್ಕ ಭಾಗದಿಂದ ಕುಂಬಳೆ ಭಾಗಕ್ಕೆ ಧಾವಿಸಿ ಬಂದ  ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟ ಗೋಪಾಲ ಶೆಟ್ಟಿ ಅವರ ಮೇಲೆ ಇನ್ನೊಂದು ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಗೋಪಾಲ ಶೆಟ್ಟಿಯವರನ್ನು ಸ್ಥಳೀಯ ನಾಗರಿಕರು ಕುಂಬಳೆ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಬೇಬಿ, ಮಕ್ಕಳಾದ ಸಹನ, ಸಂಜನ್, ಅಳಿಯ ಕಾರ್ತಿಕ್, ಸಹೋದರ ಸಹೋದರಿಯರಾದ ಕವಿತ, ಸರಸ್ವತಿ, ವಿಶ್ವಕುಮಾರಿ, ಹೇಮಂತ್ ಎಂಬಿವರನ್ನು ಅಗಲಿದ್ದಾರೆ. ಇವರ ಓರ್ವ ಸಹೋದರ ರಾಧಾಕೃಷ್ಣ ಈ ಹಿಂದೆಯೇ ‌ನಿಧನರಾಗಿದ್ದರು. ಬದಿಯಡ್ಕ ಪೊಲೀಸರು ಎರಡೂ ಕಾರು ಚಾಲಕರುಗಳ ವಿರುದ್ಧ ಕೇಸು ದಾಖಲಿಸಿದರು.

Post a Comment

0 Comments