Ticker

6/recent/ticker-posts

ಅಜ್ಜಿ ಹಲಸಿನ ಹಣ್ಣು ತುಂಡರಿಸುವ ವೇಳೆ ಕತ್ತಿಯ ಮೇಲೆ ಬಿದ್ದು ಎಂಟು ವರ್ಷದ ಬಾಲಕ ಮೃತ್ಯು


 ಕಾಸರಗೋಡು: ಅಜ್ಜಿ ಹಲಸಿನ ಹಣ್ಣು  ತುಂಡರಿಸುವ ವೇಳೆ ಕತ್ತಿಯ ಮೇಲೆ ಬಿದ್ದು ಎಂಟು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ.  ನೆಕ್ರಾಜೆ ಬಳಿಯ ಕೋಳಾರಿ ನಿವಾಸಿ ಅಮೀರ್- ಸುಲೈಖಾ ದಂಪತಿಯ ಪುತ್ರ 

ಶಹಬಾತ್ ಹುಸೈನ್  ಮೃತಪಟ್ಟ ಬಾಲಕ. ನಿನ್ನೆ (ಬುದವಾರ) ಸಂಜೆ 7.30 ಕ್ಕೆ ಬೆಳ್ಳೂರಡ್ಕ ಅಜ್ಜಿಯ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಂಗಳದಲ್ಲಿ ಅಜ್ಜಿ ಹಲಸಿನ ಹಣ್ಣು ಮೂರುತ್ತಿದ್ದು  ಈ ವೇಳೆ ಶಹಬಾತ್ ಹುಸೈನ್ ಹಾಗೂ ಸಹೋದರ ಹಸನ್ ಸಹದ್ ಆಟವಾಡುತ್ತಿದ್ದರು. ಈ ವೇಳೆ  ಶಹಬಾತ್ ಹುಸೈನ್  ಜಾರಿ ಕತ್ತಿಯ ಮೇಲೆ ಬಿದ್ದನೆನ್ನಲಾಗಿದೆ. ಗಂಭೀರ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಬಾಲಕನ ಎದೆಗೆ ಗಂಭೀರ ಗಾಯಗಳಾಗಿವೆ.  ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೃತ ಶಹಬಾತ್ ಹುಸೈನ್ ಪಿಲಾಂಕಟ್ಟೆ ಶಾಲೆಯ 2 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

Post a Comment

0 Comments