13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮದ್ರಸ ಅಧ್ಯಾಪಕನಿಗೆ ನ್ಯಾಯಾಲಯ 86 ವರ್ಷ ಕಠಿಣ ಸಜೆ ಹಾಗೂ ನಾಲ್ಕುವರೆ ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ.ಮಲಪ್ಪುರಂ ಒದುಕುಂಗಲ್ ನಿವಾಸಿ ಜಾಬಿರ್ ಅಲಿ(30) ಎಂಬಾತನಿಗೆ ಮಂಜೇರಿ ವಿಶೇಷ ಪೋಕ್ಸೊ ನ್ಯಾಯಾಲಯದ ಜಡ್ಜ್ ಎ.ಎಂ.ಅಶ್ರಫ್ ಈ ಶಿಕ್ಷೆ ವಿಧಿಸಿದ್ದಾರೆ. ದಂಡ ಪಾವತಿಸದೇ ಇದ್ದಲ್ಲಿ 8 ತಿಂಗಳು ಅಧಿಕ ಸೆರೆ ಮನೆ ವಾಸ ಮಾಡಬೇಕಾಗಿದೆ.
2022 ಎಪ್ರಿಲ್ 21 ರಂದು ಬೆಳಗ್ಗೆ ಘಟನೆ ನಡೆದಿತ್ತು. ಮಲಪ್ಪುರಂ ವನಿತಾ ಇನ್ಸ್ಪೆಕ್ಟರ್ ಆರೋಪಿಯನ್ನು ಬಂಧಿಸಿತ್ತು.
0 Comments