ಏತಡ್ಕ:ಜೈ ಗುರುದೇವ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಜ್ಜಿಮೂಲೆ ಇದರ ಆಶ್ರಯದಲ್ಲಿ 35ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅಗಸ್ಟ್ 17 ಆದಿತ್ಯವಾರದಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಅಂಗವಾಗಿ ಅಂದು ಬೆಳಗ್ಗೆ 8.30ಕ್ಕೆ ಶ್ರೀ ಹರಿನಾರಾಯಣ ನಡುವಂತಿಲ್ಲಾಯ ಉದ್ಘಾಟಿಸುವರು.
9 ಕ್ಕೆ ಕುಣಿತ ಭಜನಾ ಕಾರ್ಯಕ್ರಮ, 10 ಕ್ಕೆ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ಜರಗಲಿದೆ.
ಅಂಗನವಾಡಿ ಮಕ್ಕಳಿಗೆ, 1-4 ತರಗತಿ ಮಕ್ಕಳಿಗೆ, 5-7ತರಗತಿ ಮಕಳಿಗೆ,8-10ತರಗತಿ ಮಕ್ಕಳಿಗೆ,ಮಹಿಳೆಯರಿಗೆ,ಗಂಡಸರಿಗೆ ವಿವಿದ ಸ್ಪರ್ದೆಗಳು ಇರುವುದು.ಮಧ್ಯಾಹ್ನ ಭೋಜನ ವ್ಯವಸ್ಥೆ, 2 ಗಂಟೆಗೆ ಹಗ್ಗ ಜಗ್ಗಾಟ, ಸಂಜೆ ಗಂಟೆ 6 ರಿಂದ ಮ್ಯೂಸಿಕ್ ಜಂಕ್ಷನ್(ರಾಗ ಸಂಗಮ ಬದಿಯಡ್ಕ ಇವರಿಂದ) ಇರುವುದು.ಸಾಯಂಕಾಲ 4.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಪ್ರಾರ್ಥನೆ,ಕ್ಲಬ್ ಗೌರವಾಧ್ಯಕ್ಷ ಜಾನ್ ಕ್ರಾಸ್ತರಿಂದ ಸ್ವಾಗತ, ಶ್ರೀ ಕೃಷ್ಣ ಭಟ್ ಅಜ್ಜಿಮೂಲೆ ಅಧ್ಯಕ್ಷತೆ ವಹಿಸುವರು.ಶ್ರೀ ಹವಲ್ದಾರ್ ಆಚಲ ಎಂ. ಜಿ. ಪುತ್ರಕ್ಕಳ (ಮಾಜಿ ಸೈನಿಕ ಭಾರತೀಯ ಭೂ ಸೇನೆ), ಡಾ| ರತ್ನಾಕರ ಮಲ್ಲಮೂಲೆ,ಶ್ರೀ ಜನಾರ್ದನ ಎನ್. (ಅಬಕಾರಿ ಾಧಾಖೆ ಕಾಸರಗೋಡು ಡಿವಿಷನ್) ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಶ್ರೀ ರಾಜರಾಂ ಕೆ. ವಿ. (ಮುಖ್ಯೋಪಾಧ್ಯಾಯರು ಎ.ಯ.ಪಿ. ಶಾಲೆ. ಏತಡ್ಕ) ಶುಭ ಹಾರೈಸುವರು. ಅನಂತರ ಬಹುಮಾನ ವಿತರಣೆ ,
ಶ್ರೀ ರಾಜೇಶ್ ಅಜ್ಜಿಮೂಲೆ (ಕ್ರಟ್ ಸದಸ್ಯರು) ವಂದಿಸುವರು.ಶ್ರೀ ಜಯ ಮಣಿಯಂಪಾರೆ (ಪತ್ರ ಕರ್ತ) ನಿರೂಪಿಸುವರು.
0 Comments