Ticker

6/recent/ticker-posts

ಮುಳಿಯಾರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ, ಮನೆಯಂಗಳದಲ್ಲಿ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಕೊಂದು ಪರಾರಿ


 ಬೋವಿಕಾನ: ಮುಳಿಯಾರು ಪರಿಸರದಲ್ಲಿ ಮತ್ತೆ ಚಿರತೆ ಕಾಟ ಉಂಟಾಗಿದೆಯೆಂದು ತಿಳಿದುಬಂದಿದೆ.  ಮುಳಿಯಾರು ಬಾವಿಕ್ಕರೆ ಬಳಿಯ ಅಮ್ಮಂಕಲ್ಲು ಸಿಂಧು ಎಂಬವರ ಮನೆಗೆ ಚಿರತೆ ಬಂದಿದೆ. ಮನೆಯಂಗಳದಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಕೊಂದ ಚಿರತೆ, ಕಳೇಬರವನ್ನು ಕೊಂಡು  ಹೋಗಲಾಗದೆ ಅಲ್ಲೇ ಬಿಟ್ಟು ಹೋಗಿದೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಚಿರತೆಯ ಹೆಜ್ಜೆಯನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರದೇಶದ ಜನರು ಭಯ ಭೀತರಾಗಿದ್ದಾರೆ. ಅಲ್ಪ ಕಾಲದ ಬಿಡುವಿನ ನಂತರ ಚಿರತೆ   ಕಂಡು  ಬಂದಿರುವುದು ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ತಲೆ ನೋವಾಗಿ ಪರಿಣಮಿಸಿದೆ

Post a Comment

0 Comments