Ticker

6/recent/ticker-posts

ರೈಲು ನಿಲ್ದಾಣ ಬಳಿ ನಿಲ್ಲಿಸಿದ್ದ ಬೈಕ್ ನಿಂದ ಪೆಟ್ರೋಲು ಕಳವುಗೈದ ಓರ್ವನ ಬಂಧನ, ಓರ್ವ ಪರಾರಿ; ಬಂಧಿತ ಆರೋಪಿ ಪೊಲೀಸರ ಕಣ್ಣು ತಪ್ಪಿಸಿ ಠಾಣೆಯಿಂದ ಪರಾರಿಯಾಗಲು ವಿಫಲ ಯತ್ನ


 ಕುಂಬಳೆ:  ಕಾಸರಗೋಡು ರೈಲು ನಿಲ್ದಾಣದ ಬಳಿ ನಿಲ್ಲಿಸಿದ್ದ ಬೈಕ್ ನಿಂದ ಪೆಟ್ರೋಲ್ ಕಳವುಗೈದ ಯುವಕನನ್ನು ಬಂಧಿಸಲಾಗಿದೆ. ಮೊಗ್ರಾಲು ಬದ್ರಿಯಾ ನಗರ  ಮಸೀದಿಗೆ ಸಮೀಪದ ಕೆ.ಪಿ.ರುಮೈಸ್(20) ಬಂಧಿತ ಆರೋಪಿ. ಕುಂಬಳೆ ಎಸ್.ಐ.ಪ್ರದೀಪ್ ಕುಮಾರ್ ಹಾಗೂ ತಂಡ ನಿನ್ನೆ (ಆದಿತ್ಯವಾರ) ರಾತ್ರಿ ಆರೋಪಿಯನ್ನು ಬಂಧಿಸಿದೆ. ಈತನ ಜತೆಗಿದ್ದ ಮೇಲ್ಪರಂಬ ನಿವಾಸಿ ರಿಸ್ವಾನ್ ಓಡಿ ಪರಾರಿಯಾಗಿದ್ದಾನೆ.

   ಬಂಧಿತನಾದ ರುಮೈಸ್ ನನ್ನು ಕುಂಬಳೆ ಠಾಣೆಯಲ್ಲಿ ಇರಿಸಲಾಗಿದ್ದು ಈತ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಎಸ್.ಐ.ಯವರು ಆತನ ಹಿಂದೆ ಓಡಿ ಬಂಧಿಸಿದ್ದಾರೆ. ಈತನ ವಿರುದ್ದ ಠಾಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದನೆಂದು ಇನ್ನೊಂದು ಕೇಸು ದಾಖಲಿಸಲಾಗಿದೆ

Post a Comment

0 Comments