Ticker

6/recent/ticker-posts

ಹುಲ್ಲು ತರಲು ಅಡಿಕೆ ತೋಟಕ್ಕೆ ಹೋಗಿದ್ದ ಮಹಿಳೆ ಕೊಳದಲ್ಲಿ ಬಿದ್ದು ಮೃತ್ಯು


 ಬದಿಯಡ್ಕ: ಹುಲ್ಲು ತರಲೆಂದು ಮನೆಯ ಬಳಿಯ ತೋಟಕ್ಕೆ ಹೋಗಿದ್ದ ಮಹಿಳೆ ಕೊಳದಲ್ಲಿ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನಕಟ್ಟೆ ನೆಡುಮೂಲೆಯ ಕೃಷ್ಣನ್ ರವರ ಪತ್ನಿ ವಿಶಾಲಾಕ್ಷಿ(73) ಮೃತಪಟ್ಟ ಮಹಿಳೆ. ಇಂದು (ಗುರುವಾರ) ಬೆಳಗ್ಗೆ ಅವರು ಹುಲ್ಲು ತರಲೆಂದು ಅಡಿಕೆ ತೋಟಕ್ಕೆ ಹೋಗಿದ್ದರು. ಈ ವೇಳೆ ಕೊಳದಲ್ಲಿ ಬಿದ್ದರೆನ್ನಲಾಗಿದೆ. ಅನಂತರ ಇವರನ್ನು ಮೇಲಕ್ಕೆತ್ತಿದ್ದರೂ ಮೃತಪಟ್ಡಿದ್ದರು. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು. ಮೃತರು ಸಹೋದರ ಸಹೋದರಿಯರಾದ ಸುಶೀಲ, ಶಾರದ, ಕುಞಕೃಷ್ಣ , ಕುಞಮ್ಮ, ವಸಂತ ಎಂಬಿವರನ್ನು ಅಗಲಿದ್ದಾರೆ

Post a Comment

0 Comments