Ticker

6/recent/ticker-posts

ಐತಿಹಾಸಿಕ ಮಹತ್ವ ಹೊಂದಿರುವ ಪಟ್ಟತ್ತಮೋಗರು ಹೆಸರು ಬದಲಾವಣೆ ಖಂಡನೀಯ: ಬಿಜೆಪಿ ಕೋಜಿಕ್ಕೋಡ್ ವಲಯ‌ ಉಪಾಧ್ಯಕ್ಷ ವಿಜಯಕುಮಾರ್ ರೈ ಹೇಳಿಕೆ


 ಉಪ್ಪಳ:  ಐತಿಹಾಸಿಕ ಮಹತ್ವ ಹೊಂದಿರುವ ಪಟ್ಟತ್ತಮೋಗರು ಎಂಬ ಹೆಸರನ್ನು ತನ್ನ ರಾಜಕೀಯ ಲಾಭಕ್ಕಾಗಿ ಸಿಪಿಎಂ ಪಡ್ತತ್ತೂರು ಎಂದು ಮರುನಾಮಕರಣ ಮಾಡುವುದನ್ನು ಒಪ್ಪಲಾಗದು ಎಂದು ಬಿಜೆಪಿ ಕೋಜಿಕ್ಕೋಡ್ ವಲಯ ಉಪಾಧ್ಯಕ್ಷ ವಿಜಯಕುಮಾರ್ ರೈ ಹೇಳಿದ್ದಾರೆ. ಪಟ್ಟತ್ತಮೋಗರು ಎಂಬ ಹೆಸರಿಗೆ ಅದರದ್ದೇ ಆದ ಇತಿಹಾಸವಿದೆ. ಇದನ್ನು ಅಳಿಸಿ ಹಾಕಲು ಸಾಧ್ಯವೇ ಇಲ್ಲ. ಕಾಸರಗೋಡಿನ  ಐತಿಹಾಸಿಕ ನಮ್ಮ ಹಿಂದು ಧಾರ್ಮಿಕ, ಸಾಂಸ್ಕೃತಿಕ ಕೇಂದ್ರಗಳ ಹೆಸರುಗಳನ್ನು ತೆಗೆದುಹಾಕುತ್ತಿರುವುದು  ಮುಸ್ಲಿಂ ಲೀಗ್, ಸಿಪಿಎಂ  ಒಳಗೊಂಡಿರುವ ರಾಜಕೀಯ ಸಂಚು ಅಗಿದೆ. ತಕ್ಷಣವೇ ಪಟ್ಟತ್ತಮೋಗರು ಮೂಲ ಹೆಸರನ್ನೇ ಮರು ನಾಮಕರಣ ಮಾಡದಿದ್ದರೆ ಬಿಜೆಪಿ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡುವುದಾಗಿ   ಶ್ರೀ ವಿಜಯಕುಮಾರ್ ರೈಯವರು ಎಚ್ಚರಿಕೆ ನೀಡಿದರು.

Post a Comment

0 Comments