Ticker

6/recent/ticker-posts

ಪಟ್ಟತ್ತಮೊಗೇರು ಸ್ಥಳ ನಾಮ ಬದಲಾವಣೆ - ರಾಜ್ಯ ಚುನಾವಣಾ ಆಯೋಗಕ್ಕೆ ಸ್ಥಳೀಯರ ದೂರು

 


ಮಂಜೇಶ್ವರ : ಮೀಂಜ ಪಂಚಾಯತಿನ ವಾರ್ಡ್ ವಿಭಜನೆ ಸಂದರ್ಭದಲ್ಲಿ ಚಾರಿತ್ರಿಕ ಪಟ್ಟತ್ತಮೊಗೇರು ಎಂಬ ಸ್ಥಳನಾಮವನ್ನು ಏಕಾಎಕಿ ಪಟ್ಟತ್ತೂರು ಎಂದು ಬದಲಾಯಿಸಲಾಗಿದೆ.ಇದರ ವಿರುದ್ಧ ಸ್ಥಳೀಯರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಈ ಹಿಂದಿನ ಮೂಡಂಬೈಲು ಮತ್ತು ಮಜಿಬೈಲು ಎಂಬ ವಾರ್ಡನ್ನು ಹೊಸತಾಗಿ ಹೆಚ್ಚುವರಿ ವಾರ್ಡ್ ನ್ನು ರಚಿಸುವ ಪಟ್ಟತ್ತಮೊಗೇರು ಸ್ಥಳನಾಮವನ್ನು ತೆಗೆದು ಹೊಸದಾಗಿ ಪಟ್ಟತ್ತೂರು ಎಂದು ಬದಲಾಯಿಸಲಾಗಿದೆ. ಸರಕಾರದ ಎಲ್ಲಾ ದಾಖಲೆಗಳಲ್ಲಿ,ಸ್ಥಳೀಯ ಮಸೀದಿ, ತರವಾಡು ಮನೆಗಳಲ್ಲಿ ಪಟ್ಟತ್ತಮೊಗೇರು ಎಂದೇ ದಾಖಲೆ ಇರುವಾಗ ಈ ಹೆಸರಿನ‌ ಹಿಂದಿನ ಚರಿತ್ರೆಯನ್ನು ಮರೆ ಮಾಚುವ ಉದ್ದೇಶದಿಂದ ಏಕಾಎಕಿ ಪಟ್ಟತ್ತೂರು ಎಂದು ಬದಲಾಯಿಸಲಾಗಿದೆ. ನಿಜವಾಗಿಯೂ ಪಟ್ಟತ್ತೂರು ಎಂಬ ಹೆಸರೇ ಈ ಪ್ರದೇಶದಲ್ಲಿ ಇಲ್ಲದಿರುವಾಗ ಜನರ ಭಾವನೆಗಳನ್ನು ಕಡೆಗಣಿಸಿ ಈ ಹೆಸರು ಇಡಲಾಗಿದೆ. 

ಮೊಗೇರ ಸಮುದಾಯದ ಮುಗೇರನೆಂಬ ರಾಜ ರಾಜ್ಯವಾಳಿದ ಕುರುಹು ಈಗಲೂ ಇಲ್ಲಿದೆ. ಈ ಹಿನ್ನಲೆಯಲ್ಲಿ ಇಲ್ಲಿಗೆ ಪಟ್ಟತ್ತಮೊಗೇರು ಎಂಬ ಸ್ಥಳನಾಮ ಬಂದಿತ್ತು. ಇಂತಹ ಮಹತ್ವ ಪೂರ್ಣ ಇತಿಹಾಸವನ್ನು ಮರೆ ಮಾಚುವುದು ಸರಿಯಲ್ಲ.ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ಪಟ್ಟತ್ತಮೊಗೇರು ಎಂಬ ಹೆಸರನ್ನು ಶಾಶ್ವತಗೊಳಿಸಬೇಕೆಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ಸ್ಥಳೀಯರು ಆಗ್ರಹಿಸಿದ್ದಾರೆ.

Post a Comment

0 Comments