Ticker

6/recent/ticker-posts

ಭಾರೀ ಬಿರುಗಾಳಿ; ಮನೆಯ ಮೇಲೆ ಮರ ಬಿದ್ದು ಮಲಗಿ ನಿದ್ರಿಸುತ್ತಿದ್ದ ವ್ಯಕ್ತಿ ಮೃತ್ಯು


 ಭಾರೀ ಬಿರುಗಾಳಿಯಿಂದಾಗಿ ಮನೆಯ ಮೇಲೆ ಮರ ಬಿದ್ದು ಮಲಗಿ ನಿದ್ರಿಸುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಕೂತುಪರಂಬ ಕೊಳಯಾಡ್ ತೆಟ್ಟುಮಲ್ ನಿವಾಸಿ ಚಂದ್ರನ್(78) ಮೃತಪಟ್ಟ ವ್ಯಕ್ತಿ. ‌ಶುಕ್ರವಾರ ತಡರಾತ್ರಿ 2 ಗಂಟೆಯ ವೇಳೆ ಈ ಘಟನೆ ನಡೆದಿದೆ. ಮಳೆಯ ಜತೆ ಭಾರೀ ಬಿರುಗಾಳಿ ಬೀಸಿದ ಹಿನ್ನೆಲೆಯಲ್ಲಿ ಮರ ಬುಡ ಸಹಿತ ಮನೆಯ ಮೇಲೆ ಬಿದ್ದಿದೆ.‌ಚಂದ್ರನ್ ಮರದಡಿಯಲ್ಲಿ ಮನೆಯೊಳಗೆ ಸಿಲುಕಿಕೊಂಡಿದ್ದು ಊರವರು ಸೇರಿ ಹೊರಕ್ಕೆ ತಂದು ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಇದೇ ವೇಳೆ ಮನೆಯಲ್ಲಿದ್ದ ಚಂದ್ರನ್ ಅವರ ಪತ್ನಿ, ಮಕ್ಕಳು ಗಾಯಗಲ್ಲದೆ ಪಾರಾದರು

Post a Comment

0 Comments