ಕಾಸರಗೋಡು: ಉಯ್ಯಾಲೆ ಕುತ್ತಿಗೆಗೆ ಸಿಲುಕಿ ಉಸಿರುಗಟ್ಟಿ 12 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಆಂದ್ರಪ್ರದೇಶ ಚಿಟ್ಟೂರು ನಿವಾಸಿ ಹಾಗೂ ನಾಲ್ಕನೇ ಮೈಲಿನ ಬಾಡಿಗೆ ಮನೆಯಲ್ಲಿ ವಾಸಿಸುವ ಕೂಲಿ ಕಾರ್ಮಿಕ ಮಸ್ತಾನ್ ಅವರ ಪುತ್ರ ಉಮರ್ ಫಾರೂಕ್(12) ಮೃತಪಟ್ಟ ಬಾಲಕ. ಇಂದು (ಮಂಗಳವಾರ) ಬೆಳಗ್ಗೆ ಈ ಘಟನೆ ನಡೆದಿದೆ.
ಬೆಳಗ್ಗೆ ಮಸ್ತಾನ್ ಕೂಲಿ ಕೆಲಸಕ್ಕೆ ಹೋಗಿದ್ದರು. ತಾಯಿ ನಸ್ರಿನ್ ಅಂಗಡಿಗೆ ಹೊರಟಾಗ ಪುತ್ರ ಉಮರ್ ಫಾರೂಕ್ ತಾಯಿಯ ಸೀರೆಯನ್ನು ಉಯ್ಯಾಲೆ ಮಾಡಿ ಅದರ ಮೇಲೆ ಮಲಗಿ ಆಡವಾಡುತ್ತಿದ್ದನು. ತಾಯಿ ನಸ್ರಿನ್ ಅಂಗಡಿಗೆ ಹೋಗಿ ಬಂದಾಗ ಉಮರ್ ಫಾರೂಕ್ ಉಸಿರುಗಟ್ಟಿದ್ದನು. ಸೀರೆ ಅವನ ಕುತ್ತಿಗೆಗೆ ಸಿಲುಕಿತ್ತು. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲಾಗಲಿಲ್ಲ. ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದರು
0 Comments