Ticker

6/recent/ticker-posts

ರಾಜ್ಯದಲ್ಲಿ ನಾಳೆಯಿಂದ ಖಾಸಗಿ ಬಸ್ ಮುಷ್ಕರ


 ತಿರುವನಂತಪುರಂ: ಕೇರಳ ಬಸ್ ಓಪರೇಟರ್ಸ್ ಕೋರ್ಡಿನೇಶನ್ ಕಮಿಟಿಯ ಆಶ್ರಯದಲ್ಲಿ ನಾಳೆಯಿಂದ ರಾಜ್ಯದಲ್ಲಿ ಖಾಸಗಿ ಬಸ್ ‌ಮುಷ್ಕರ ನಡೆಯಲಿದೆ. ವಿದ್ಯಾರ್ಥಿಗಳ ಟಿಕೆಟ್ ದರ ಏರಿಕೆ, ಲಿಮಿಟೆಡ್ ಸ್ಟಾಪ್ ಪರ್ಮಿಟಿ ಯಥಾ ಸ್ಥಿತಿ ಮುಂದುವರಿಯಬೇಕು, ಅನಧಿಕೃತ ದಂಡ ವಸೂಲಿ ರದ್ದುಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಯಿತ್ತಿದೆ. ಖಾಸಗಿ ಬಸ್ಸು ಮುಷ್ಕರದ ಹಿನ್ನೆಲೆಯಲ್ಲಿ ನಾಳೆಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಲಿದ್ದಾರೆ. ಮಳೆಗಾಲವಾದ ಕಾರಣ ಮಕ್ಕಳು ಶಾಲೆಗೆ ಹೋಗಿ ಬರಲು ಕಷ್ಟಪಡಬೇಕಾಗುತ್ತದೆ.

   ಇದೇ ವೇಳೆ ಸಾರಿಗೆ ಸಚಿವ ಗಣೇಶ್ ಕುಮಾರ್ ಹಾಗೂ ಬಸ್ಸು ಮಾಲಕರು ಮಾತುಕತೆ ನಡೆಸುವರು ಎಂಬ ಬಗ್ಗೆಯೂ ವರದಿಯಾಗಿದೆ. ಆದರೆ ಮಾತುಕತೆಯ ದಿನಾಂಕ ತಿಳಿದು ಬಂದಿಲ್ಲ. ಕೇರಳ ಬಸ್ ಆಪರೇಟರ್ಸ್ ಫಾರಂ ಎಂಬ ಸಂಘಟನೆಯು ತಾವು ಮುಷ್ಕರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈ ಹಿಂದೆಯೇ ತಿಳಿಸಿತ್ತು

Post a Comment

0 Comments