Ticker

6/recent/ticker-posts

ಕುಸಿದು ಬಿದ್ದ ತಂದೆಯನ್ನು ಆಸ್ಪತ್ರೆಗೆ ಸಾಗಿಸುವ ಮದ್ಯೆ ಮಗನಿಗೂ ಹೃದಯಾಘಾತ, ನಿಮಿಷಗಳ ಅಂತರದಲ್ಲಿ ತಂದೆ ಮಗ ಮೃತ್ಯು


 ಕೂಲಿ ಕಾರ್ಮಿಕರಾದ ತಂದೆ ಹಾಗೂ ಮಗ ನಿಮಿಷಗಳ ಅಂತರದಲ್ಲಿ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ.‌ಮಲಪ್ಪುರಂ ಎರುಮಾಲ್ ಪುರಯ್ಕಲ್ ನಿವಾಸಿ ಥೋಮಸ್(75), ಪುತ್ರ ಟೆನ್ಸ್ ಥೋಮಸ್(47) ಮೃತಪಟ್ಟವರು. ನಿನ್ನೆ (ಮಂಗಳವಾರ) ಮದ್ಯಾಹ್ನ ಈ ಘಟನೆ ನಡೆದಿದೆ. ತಂದೆ ಥೋಮಸ್ ಕೆಲಸದ ಮದ್ಯೆ ಹೃದಯಾಘಾತದಿಂದ ಕುಸಿದು ಬಿದ್ದರೆನ್ನಲಾಗಿದೆ.  ಜತೆಗಿದ್ದ ಪುತ್ರ ಟೆನ್ಸ್ ಥೋಮಸ್ ಹಾಗೂ ಗೆಳೆಯರು ಸೇರಿ  ತಂದೆಯನ್ನು ವಾಹನದಲ್ಲಿ ಆಸ್ಪತ್ರೆಗೆ ಕೊಂಡೊಯ್ದರು. ದಾರಿ ಮಧ್ಯೆ ಪುತ್ರ ಟೆನ್ಸ್ ಸಹ ವಾಹನದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದರು. ಇಬ್ಬರೂ ಆಸ್ಪತ್ರೆಗೆ ತಲುಪುವ ವೇಳೆ ಕೊನೆಯುಸಿರೆಳೆದರು. ಪೊಲೀಸರು ಅಸಹಜ ಪ್ರಕರಣದ ದಾಖಲಿಸಿದರು.

Post a Comment

0 Comments