Ticker

6/recent/ticker-posts

ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಬದಿಯಡ್ಕ: ಯುವಕನ ಮೃತದೇಹ  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬದಿಯಡ್ಕ ಚುಳ್ಳಿಕ್ಕಾನ ನಿವಾಸಿ ಸಿ.ಎಚ್.ಬಾಲಕೃಷ್ಣ(33) ಮೃತಪಟ್ಟ ಯುವಕ.  ನಿನ್ನೆ (ಶನಿವಾರ) ರಾತ್ರಿ ಬಾಲಕೃಷ್ಣ ಊಟ ಮಾಡಿ ಮಲಗಿದ್ದರು. ಬೆಳಗ್ಗೆ ಎದ್ದು ನೋಡುವಾಗ ಮನೆಯ ಬಳಿಯ ಶೆಡ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು. ಇವರು ಬದಿಯಡ್ಕದಲ್ಲಿ ಚಪ್ಪರ, ಅಲಂಕಾರ ಸಂಸ್ಥೆಯ ನೌಕರರಾಗಿದ್ದಾರೆ. ಮೃತರ ತಂದೆ ಬಾಬು, ತಾಯಿ ಲೀಲಾವತಿ ಈ ಹಿಂದೆಯೇ ನಿಧನರಾಗಿದ್ದರು. ಮೃತರು ಸಹೋದರ ರಾಧಾಕೃಷ್ಣ, ಸಹೋದರಿ ಅನಿತ ಎಂಬಿವರನ್ನು ಅಗಲಿದ್ದಾರೆ

Post a Comment

0 Comments