ಪೆರ್ಮುದೆ : ಹಿರಿಯ ಕೃಷಿಕ, ಉದ್ಯಮಿ, ಗುಂಪೆ ರಾಮ ಭಟ್ (84) ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ (ಬುದವಾರ) ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಅವರು ಕೊನೆಯುಸಿರೆಳೆದರು.
ಇವರ ಪತ್ನಿ ಜಯಲಕ್ಷ್ಮಿ ಈ ಹಿಂದೆಯೇ ತೀರಿಕೊಂಡಿದ್ದಾರೆ. ಮೃತರು ಮಕ್ಕಳಾದ ರಾಧಾಕೃಷ್ಣ, ರಾಜಗೋಪಾಲ್ (ಉದ್ಯಮಿ ಬೆಂಗಳೂರು), ಗೋವಿಂದರಾಜ್ (ಪೆರ್ಮುದೆಯ ಗುಂಪೆ ಟ್ರೇಡರ್ಸ್ ಮಾಲಕ) ಸೊಸೆಯಂದಿರಾದ ವಿಜಯಪ್ರಭಾ, ಮಂಗಳಗೌರಿ ಹಾಗೂ ರಾಜಶ್ರೀ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಗಲಿದ್ದಾರೆ.
0 Comments