Ticker

6/recent/ticker-posts

ಹಳದಿ ಕಾಮಾಲೆ ರೋಗ ಪೀಡಿತನಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿ ಮೃತ್ಯು


 ಹಳದಿ ಕಾಮಾಲೆ ರೋಗ ಪೀಡಿತನಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ  ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಕೋಜಿಕ್ಕೋಡು ಕೊಡುವಳ್ಳಿ ಮೇಲೇ ಚಾಕಲ್ ಅಹಮ್ಮದ್ ಕುಟ್ಟಿಯವರ  ಪುತ್ರ ಮುಹಮ್ಮದ್ ಸಯಾನ್(14) ಮೃತಪಟ್ಟ ವಿದ್ಯಾರ್ಥಿ. ಈತ ಕೊಡುವಳ್ಳಿ ವಟ್ಟೋಳಿ ಎಂ.ಜೆ.ಹಯರ್ ಸೆಕಂಡರಿ ಶಾಲೆಯಲ್ಲಿ 9 ನೇ ತರಗತಿಯ ವಿದ್ಯಾರ್ಥಿಯಾಗಿದ್ದನು. ವಾರದ ಹಿಂದೆ ಈತನಿಗೆ ಹಳದಿ ಕಾಮಾಲೆ ಕಾಣಿಸಿಕೊಂಡಿದ್ದು ಕೋಜಿಕ್ಕೋಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದ ಹಿನ್ನೆಲೆಯಲ್ಲಿ ಆತ ನಿನ್ನೆ (ಶುಕ್ರವಾರ) ರಾತ್ರಿ ಕೊನೆಯುಸಿರೆಳೆದನು.

Post a Comment

0 Comments