Ticker

6/recent/ticker-posts

ಬೆಳ್ಳೂರಿನಲ್ಲಿ ಗಾಳಿಗೆ ಮನೆ ಛಾವಣಿಯ ಹೆಂಚು ಹಾರಿ ಅಪಾರ ನಾಶ


ಬದಿಯಡ್ಕ : ನಿನ್ನೆ ಸಂಜೆ ಬೀಸಿದ ಗಾಳಿ ಮಳೆಗೆ ಮನೆಯೊಂದರ ಹೆಂಚಿನ ಛಾವಣಿಯ ಹಂಚುಗಳು ಹಾರಿ ಹೋಗಿ ಅಪಾರ ನಾಶ ನಷ್ಟ ಸಂಭವಿಸಿದೆ. 

ಬದಿಯಡ್ಕ ಸಮೀಪದ ಬೆಳ್ಳೂರು ಗ್ರಾ.ಪಂ.ವ್ಯಾಪ್ತಿಯ ಪೆರ್ವತ್ತೋಡಿ ಎಂಬಲ್ಲಾಗಿದೆ ಈ ಘಟನೆ.

ಇಲ್ಲಿನ ದಾಮೋದರ ಶೆಟ್ಟಿಯವರ ಮನೆಯ ಹಂಚು ಹಾಸಿದ ಛಾವಣಿ ನಿನ್ನೆ ಸಂಜೆ 6 ಗಂಟೆಗೆ ಬೀಸಿದ ಭಾರೀ ಗಾಳಿಗೆ ತುತ್ತಾಗಿ ಕುಸಿದು ಬಿದ್ದಿದೆ. ಈ ವೇಳೆ ಮನೆಯವರು ಸ್ಲಾಬ್ ಹಾಸಿದ ಹೊರ ವರಾಂಡದಲ್ಲಿ ಕುಳಿತು ಚಾಹ ಸೇವಿಸುತ್ತಿದ್ದ ಕಾರಣ ಅದೃಷ್ಠವಶಾತ್ ಪಾರಾಗಿದ್ದಾರೆ. ಗಾಳಿಗೆ ಹಾರಿದ ಹಂಚುಗಳು ಮನೆಯಂಗಳದಲ್ಲಿ ಹುಡಿಯಾಗಿ ಬಿದ್ದಿದೆ. ಸುಮಾರು 75 ಸಾವಿರ ರೂ ನಾಶ‌ನಷ್ಟ ಅಂದಾಜಿಸಲಾಗಿದೆ.

Post a Comment

0 Comments