ಕುಂಬ್ಡಾಜೆ: ಬಂಟರ ಸಂಘ ಕುಂಬ್ಡಾಜೆ ಇದರ ಆಶ್ರಯದಲ್ಲಿ ಮರಿಯಾಲದ ಮಿನದನ, ಬಂಟರ ಸಮಾವೇಶ ಅಗಸ್ಟ್ 17 ಆದಿತ್ಯವಾರ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಸಭಾ ಭವನದಲ್ಲಿ ಜರಗಲಿರುವುದು. ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಅಡ್ವ.ಐ ಸುಬ್ಬಯ್ಯ ರೈ, ಕೆ.ಕೆ.ಶೆಟ್ಟಿ ಕುತ್ತಿಕಾರು, ಡಾ.ವೈ.ಭರತ್ ಶೆಟ್ಟಿ ಶಾಸಕರು ಮಂಗಳೂರು ಉತ್ತರ ಸಹಿತ ಹಲವು ದುರೀಣರು, ಕೊಡುಗೈದಾನಿಗಳು, ಸಮಾಜಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಯಕ್ಷ _ ಗಾನ ವೈಭವ, ವಿಧ್ಯಾರ್ಥಿ ವೇತನ ವಿತರಣೆ ಜರುಗಲಿರುವುದು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಪುತ್ರಕಳದಲ್ಲಿ ನಡೆಯಿತು
ಹಿರಿಯರಾದ ದೇರಣ್ಣ ರೈ ಪುತ್ರಕಳ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸದಾಶಿವ ಶೆಟ್ಟಿ ಪುತ್ರಕಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕುಂಬ್ಡಾಜೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ ಅಧ್ಯಕ್ಷತೆ ವಹಿಸಿದರು.
ಮಾತೃಸಂಘದ ಕಾಸರಗೋಡು ಸಂಚಾಲಕ ಸುಧೀರ್ ಕುಮಾರ್ ರೈ ಗಾಡಿಗುಡ್ಡೆ, ಜಿಲ್ಲಾ ಬಂಟರ ಸಂಘದ ಸದಸ್ಯೆ ಸುನಿತಾ ಜೆ ರೈ ಮರತ್ತಿಲ, ಕುಂಬ್ಡಾಜೆ ಬಂಟರ ಸಂಘದ ಉಪಾಧ್ಯಕ್ಷರುಗಳಾದ ರವೀಂದ್ರ ರೈ ಗೋಸಾಡ, ಹರ್ಷ ಕುಮಾರ್ ರೈ ಬೆಳಿಂಜ, ಸದಸ್ಯರುಗಳಾದ ಜಯಪ್ರಕಾಶ್ ರೈ ಮುಂಡ್ರಕೊಳಂಜಿ, ನವೀನ್ ರೈ ಪುತ್ರಕಳ ಫಿರ್ಕ ಕಾರ್ಯದರ್ಶಿ ಸುರೇಶ್ ರೈ ಮೊಟ್ಟಕುಂಜ, ಸದಸ್ಯ ಅನಂತ ರೈ ಬೆಳಿಂಜ ಸಹಿತ ಹಲವರು ಭಾಗವಹಿಸಿದರು. ಕುಂಬ್ಡಾಜೆ ಬಂಟರ ಸಂಘದ ಕಾರ್ಯದರ್ಶಿ ಅಮೃತರಾಜ್ ರೈ ಮರತ್ತಿಲ ಸ್ವಾಗತಿಸಿ ಕೋಶಾಧಿಕಾರಿ ಸೀತಾರಾಮ ರೈ ಮುಂಡ್ರಕೊಳಂಜಿ ವಂದಿಸಿದರು.
0 Comments