ಪೆರ್ಲ : ಖಂಡಿಗೆ ಪೂಪಾಡಿಕಲ್ಲಿನ ಶ್ರೀರಾಮನಗರದಲ್ಲಿ ಆ.15ರಂದು ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು. ಮಾಣಿಲ ಶ್ರೀಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಆಮಂತ್ರಣ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಸುಬ್ರಾಯ ನಾಯಕ್ ಖಂಡಿಗೆ, ಶೇಷಪ್ಪ ಕುಲಾಲ್ ಖಂಡಿಗೆ, ನಿರ್ಮಲ ಶೇಷಪ್ಪ ಕುಲಾಲ್ ಖಂಡಿಗೆ, ಪುಟ್ಟಪ್ಪ ಖಂಡಿಗೆ, ಜಯರಾಮ ಕುಲಾಲ್ ಖಂಡಿಗೆ,ಕೃಷ್ಣ ಭಟ್ ಖಂಡಿಗೆ, ಮುದ್ದು ಖಂಡಿಗೆ ಮೊದಲಾದವರು ಭಾಗವಹಿಸಿದ್ದರು.
ಆ.15ರಂದು ಬೆಳಿಗ್ಗೆ ಗಂಟೆ 10 ರಿಂದ ಕೃಷ್ಣವೇಷ,ಭಕ್ತಿಗೀತೆ,ಹೂಮಾಲೆ ಕಟ್ಟುವುದು,ಮಡಕೆ ಒಡೆಯುವುದು_ ಹಗ್ಗಜಗ್ಗಾಟ ಮೊದಲಾದ ಸ್ಪರ್ಧೆಗಳು ಜರಗಲಿದೆ ಸಂಜೆ ಗಂಟೆ 4 ಗಂಟೆಗೆ ಜರಗುವ ಸಮಾರೋಪ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀಧಾಮ-ಮಾಣಿಲ ಆಶೀರ್ವಚನ ನೀಡುವರು.
ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಪುಟ್ಟಪ್ಪ ಖಂಡಿಗೆ ಅಧ್ಯಕ್ಷತೆ ವಹಿಸುವರು. ಬಿ ವಸಂತ ಪೈ ಬದಿಯಡ್ಕ,ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ ಜೆ.ಎಸ್, ಮಂಜೇಶ್ವರ ಬೋಕ್ ಪಂಚಾಯತು ಸದಸ್ಯ ಅನಿಲ್ ಕುಮಾರ್, ಮಾಜಿ ಪಂಚಾಯತು ಸದಸ್ಯ ಚನಿಯಪ್ಪ ಪೂಜಾರಿ ಅಲಾರ್ ಮುಖ್ಯ ಅತಿಥಿಗಳಾಗಿರುವರು. ಈ ಸಂದರ್ಭದಲ್ಲಿ ಡಾ| ಕೇಶವ ನಾಯ್ಕ ಖಂಡಿಗೆ,ಹಿರಿಯ ದೈವ ಚಾಕರಿಯ ಮಾಯಿಲ ಖಂಡಿಗೆ,ಸ್ಥಳದಾನಗೈದ ಸುಬ್ರಾಯ ನಾಯಕ್ ಖಂಡಿಗೆ ಅವರನ್ನು ಸನ್ಮಾನಿಸಲಾಗುತ್ತದೆ. SSLC ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ A+ ಪಡೆದ ಪ್ರತಿಭಾವಂತೆ ಕು। ದಿಶಾ ಬಿ.ಆರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.ಬಳಿಕ ಸಂಜೆ 6ಗಂಟೆಯಿಂದ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ, ಮುಗೇರು ಇವರಿಂದ ಹರಿದರ್ಶನ ಎಂಬ ಯಕ್ಷಗಾನ ತಾಳಮದ್ದಳೆ ಜರಗಲಿದೆ.
0 Comments