Ticker

6/recent/ticker-posts

ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ವಾರ್ಷಿಕೋತ್ಸವ, ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಬಯಲಾಟ ಕಾರ್ಯಕ್ರಮವು  2025 ಆಗಸ್ಟ್ ತಿಂಗಳ 28 ನೇ ಗುರುವಾರದಂದು ಪೂರ್ವಾಹ್ಣ ಗಂಟೆ 10.00 ರಿಂದ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಸಮೀಪದಲ್ಲಿರುವ ಸಾಯಿತನ್ವಿ ನಿವಾಸದಲ್ಲಿ ಔಚಿತ್ಯಪೂರ್ಣವಾಗಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಈ ವರ್ಷದ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿಯನ್ನು ಹಿರಿಯ ಬಣ್ಣದ ವೇಷಧಾರಿಗಳಾದ ಶ್ರೀ ಸುರೇಶ್ ಕುಪ್ಪೆಪದವುರವರಿಗೆ ಮತ್ತು ಬಣ್ಣದ ಮಹಾಲಿಂಗ ಯಕ್ಷ ಸನ್ಮಾನವನ್ನು ಹಿರಿಯ ಬಣ್ಣದ ವೇಷಧಾರಿಗಳಾದ ಶ್ರೀ ನೀರ್ಚಾಲು ಮಾಧವ ಪಾಟಾಳಿಯವರಿಗೆ ಪ್ರದಾನ ಮಾಡಲಾಗುವುದು. ಸಂಸ್ಮರಣಾ ಕಾರ್ಯಕ್ರಮದ ಭಾಗವಾಗಿ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವು ನಡೆಯಲಿರುವುದು.

ಪ್ರಸ್ತುತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಾಯಿತನ್ವಿ ನಿವಾಸದಲ್ಲಿ ಉದ್ಯಮಿಗಳಾದ ಶ್ರೀ ಶಿವಶಂಕರ ನೆಕ್ರಾಜೆ ಮತ್ತು ಶ್ರೀಮತಿ ಜಯಲಕ್ಷ್ಮಿಯವರು ಬಿಡುಗಡೆಗೊಳಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಪಂಜತ್ತೊಟ್ಟಿಯವರು ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ ನಾರಾಯಣ ದೇಲಂಪಾಡಿಯವರು ಸ್ವಾಗತಿಸಿ ಜೊತೆ ಕಾರ್ಯದರ್ಶಿಯವರಾದ ಶ್ರೀ ಮನೀಶ್ ಎಡನೀರು ವಂದಿಸಿದರು. ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಮಹಾಲಿಂಗ ಕೆ. ದೇರೇಬೈಲು, ಸಂಚಾಲಕರಾದ ಶ್ರೀ ತಿಮ್ಮಪ್ಪ ಪುತ್ತೂರು, ಖಜಾಂಚಿ ಶ್ರೀ ರವಿಶಂಕರ ಪಳ್ಳತ್ತಡ್ಕ ಮತ್ತು ಪದಾಧಿಕಾರಿಗಳಾದ ಶ್ರೀ ಜಯರಾಮ ಪಾಟಾಳಿ ಪಡುಮಲೆ, ಶ್ರೀ ಹರೀಶ್ ರಾಜ್ ಕುರಿಯತ್ತಡ್ಕ,  ಶ್ರೀ ಕೆ ಸಿ ಮೋಹನ ಕಳತ್ತೂರು, ಶ್ರೀ ಗಣೇಶ್ ಪಾರಕಟ್ಟ, ಶ್ರೀ ನಾರಾಯಣ ಎಸ್ ಬಿ, ರಮೇಶ ಪೆರ್ಣೆ, ಮಾನ ಮಾಸ್ತರ್ ಸೀತಾಂಗೋಳಿ, ರಾಮಚಂದ್ರ ಬೆಳ್ಳಿಗೆ, ಮಹಾಲಿಂಗ ಪೆರ್ಣೆ, ಗಣೇಶ್ ನಾಯ್ಕಾಪು, ರಾಮ ಪೊಯ್ಯಕಂಡ ಮತ್ತಿರರು ಭಾಗವಹಿಸಿದ್ದರು.

Post a Comment

0 Comments