Ticker

6/recent/ticker-posts

Ad Code

ಜಿಲ್ಲಾ ಪಂ‌.ಪುತ್ತಿಗೆ ಡಿವಿಶನ್ ಐಕ್ಯರಂಗದ ಕೈವಶ : ಜನಾನುರಾಗಿ ಸೋಮಶೇಖರ್ ಗೆ ರೋಚಕ ಗೆಲುವು

 

ಪುತ್ತಿಗೆ : ಬಿಜೆಪಿಯ ಸಿಟ್ಟಿಂಗ್ ಸೀಟು ಎಂದು ಪರಿಗಣಿಸಲ್ಪಟ್ಟ ಜಿ.ಪಂ.ಪುತ್ತಿಗೆ ಡಿವಿಶನ್  ಈ ಬಾರಿ ಭಾಜಪ ಅಭ್ಯರ್ಥಿ ಮಣಿಕಂಠ ರೈ ಅವರನ್ನು ಸೋಲಿಸುವ ಮೂಲಕ ಐಕ್ಯರಂಗದ ಅಭ್ಯರ್ಥಿ ಸೋಮಶೇಖರ್ ಜೆ.ಎಸ್ ಸುಮಾರು 418 ಮತಗಳ ಅಂತರದ ರೋಚಕ ಗೆಲುವು ಸಾಧಿಸಿದ್ದಾರೆ.  ಸೋಮಶೇಖರ್ ಜೆ.ಎಸ್ 15677, ಬಿಜೆಪಿಯ ಮಣಿಕಂಠ  ರೈ 15259,ಎಡರಂಗದ ಮೊಹಮ್ಮದ್ ಹನೀಫ 12984 ಮತಗಳನ್ನು ಗಳಿಸಿದ್ದಾರೆ. ಹಿಂದೊಮ್ಮೆ ಒಂದು ಅವಧಿಗೆ ಐಕ್ಯರಂಗದ ಸಿ.ಸಂಜೀವ ರೈ, ಎಡರಂಗದ ಶಂಕರ ರೈ ಮಾಸ್ತರ್ ಗೆಲುವು ಸಾಧಿಸಿದ್ದ ಬಳಿಕ ಕಳೆದ ಎರಡು ಬಾರಿ ಈ ಡಿವಿಜನ್ ನಲ್ಲಿ ಬಿಜೆಪಿ ಗೆದ್ದಿತ್ತು . ಭಾರೀ ಸವಾಲುಗಳ ನಡುವೆ ಐಕ್ಯರಂಗ ಅಭ್ಯರ್ಥಿ ಸೋಮಶೇಖರ್ ಜೆ.ಎಸ್.ಗೆ ಇದು ರೋಚಕ ಗೆಲುವು ಆಗಿದೆ. ಈ ಹಿಂದೆ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಇವರ ವ್ಯಕ್ತಿತ್ವದ ವರ್ಚಸ್ಸಿಗೆ ಪಕ್ಷಾತೀತವಾಗಿ ಜನ ಬೆಂಬಲಿಸಿದ್ದಾರೆಂದು ಯುಡಿಎಫ್ ಸಮಿತಿ ಸಂತಸ ವ್ಯಕ್ತಪಡಿಸಿದೆ.

Post a Comment

0 Comments