Ticker

6/recent/ticker-posts

Ad Code

ಎಣ್ಮಕಜೆಯಲ್ಲಿ ಐಕ್ಯರಂಗ 8 ಸ್ಥಾನಗಳಲ್ಲಿ ಗೆಲುವು ,ಬಿಜೆಪಿ 6,ಎಡರಂಗ 4 ಸೀಟು

 


ಪೆರ್ಲ : ಹದಿನೆಂಟು ವಾರ್ಡ್ ಗಳನ್ನು ಒಳಗೊಂಡ ಎಣ್ಮಕಜೆ ಗ್ರಾ.ಪಂ.ಆಡಳಿತ 8 ಸ್ಥಾನಗಳ ಗೆಲುವಿನೊಂದಿಗೆ  ಉಳಿಸಿಕೊಂಡಿದೆ.ಚವರ್ಕಾಡ್, ಪೆರ್ಲ ಟೌನ್, ಪೆರ್ಲ ಉತ್ತರ, ಪೆರ್ಲ ದಕ್ಷಿಣ, ಗುಣಾಜೆ, ಮಣಿಯಂಪಾರೆ, ಬಣ್ಪತ್ತಡ್ಕ , ಶೇಣಿ ವಾರ್ಡ್ ಗಳಲ್ಲಿ ಐಕ್ಯರಂಗ ವಿಜಯಿಯಾಗಿದೆ.

ಕಾಟುಕುಕ್ಕೆ, ಶಿವಗಿರಿ, ವಾಣಿನಗರ, ಕಜಂಪಾಡಿ, ಬಜಕೂಡ್ಲು, ನಲ್ಕ  ಎಂಬಿಡೆಗಳಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಕಾಯ್ದುಕೊಂಡು ಪಂಚಾಯತಿನ ಅತೀ ದೊಡ್ಡ ಏಕ ಪಕ್ಷೀಯ ಪಕ್ಷವಾಗಿ ಹೊರಹೊಮ್ಮಿದೆ. ಸಾಯ, ಬಾಳೆಮೂಲೆ, ಸ್ವರ್ಗ, ಬೆಂಗಪದವು  ಎಂಬಿ ವಾರ್ಡ್ ಗಳು ಎಡರಂಗ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 

ಹಾಲಿ ಪಂಚಾಯತು ಜನಪ್ರತಿನಿಧಿಗಳಾಗಿದ್ದ ರಾಧಾಕೃಷ್ಣ ನಾಯಕ್, ಸೌದಾಭಿ ಹನೀಫ್ ರಾಮಚಂದ್ರ ಎಂ, ರಮ್ಲ ಇಬ್ರಾಹಿಂ, ಕುಸುಮಾವತಿ ಬಿ. ಈ ಬಾರಿಯು ಗೆಲುವು ಸಾಧಿಸಿದವರಾಗಿದ್ದಾರೆ.ಮಾಜಿ ಪಂ.ಪ್ರತಿನಿಧಿಗಳಾಗಿದ್ದ ಐತ್ತಪ್ಪ ಕುಲಾಲ್ ,ಆಯಿಷಾ ಎ.ಎ, ಅಬೂಬಕ್ಕರ್ ಸಿದ್ದಿಕ್ ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ ನಿವೃತ್ತ ಮುಖ್ಯೋಪಾಧ್ಯಾ ಸದಾನಂದ ಶೆಟ್ಟಿ ಕುದ್ವ,ಶಿಕ್ಷಕರಾದ ಸುಧಾಕರ ಮಾಸ್ತರ್, ಶರತ್ಚಂದ್ರ ಶೆಟ್ಟಿ ಶೈಕ್ಷಣಿಕ ರಂಗದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲಾತಿ ವಾರ್ಡಿನಲ್ಲಿ 

ಕೃಷ್ಣಪ್ಪ ಬಜಕೂಡ್ಲು  ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಳೆದ ವರ್ಷ ಬಿಜೆಪಿ ಕೈವಶವಿದ್ದ 1ನೇ ವಾರ್ಡ್ ಸಾಯದಲ್ಲಿ ಭರ್ಜರಿ ಪೈಪೋಟಿ ಕಂಡು ಬಂದಿತ್ತು. ಎಡರಂಗ ಅಭ್ಯರ್ಥಿ ಪ್ರಮೀಳಾ  ಐಕ್ಯರಂಗದ ಅಭ್ಯರ್ಥಿ ಜಯಶ್ರೀ ಎ. ಕುಲಾಲ್ ಅವರನ್ನು ಸೋಲಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.


Post a Comment

0 Comments