Ticker

6/recent/ticker-posts

Ad Code

ಬದಿಯಡ್ಕ ಪಂ.ನಲ್ಲಿ ಹತ್ತು ಪ್ಲಸ್ ಹತ್ತು ಸೀಟುಗಳೊಂದಿಗೆ ಬಿಜೆಪಿ, ಐಕ್ಯರಂಗ ಸಮಬಲ : 1 ಸೀಟಿನ ಎಡರಂಗಕ್ಕೆ ನಿರ್ಣಾಯಕ ಸ್ಥಾನ

 

ಬದಿಯಡ್ಕ : ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯುಡಿಎಫ್ ಮತ್ತು ಬಿಜೆಪಿ ನಡುವೆ ಪ್ರಬಲ ಹಣಾಹಣಿ ನಡೆದ ಬದಿಯಡ್ಕ ಪಂ. ನಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದೇ ಸಮಬಲದ ಫಲಿತಾಂಶ ಬಂದಿದೆ. ಒಟ್ಟು 21ವಾರ್ಡುಗಳ ಪಂಚಾಯತಿನಲ್ಲಿ ಆಡಳಿತಾರೂಢ ಯುಡಿಎಫ್ 10 ಮತ್ತು ವಿಪಕ್ಷ ಬಿಜೆಪಿ 10ಸ್ಥಾನಗಳನ್ನು ಗೆದ್ದುಕೊಂಡು ಸಮಬಲ ಮೆರೆದಿದೆ. ಎಡರಂಗದ ಸಿಪಿಐಎಂ 1ಸ್ಥಾನ ಪಡೆದು ನಿರ್ಣಾಯಕ ಶಕ್ತಿಯಾಗಿದೆ. ಬದಿಯಡ್ಕ ಗ್ರಾ. ಪಂ. ನಲ್ಲಿ ಈ ಹಿಂದಿನ ಚುನಾವಣೆಯಲ್ಲೂ ಯುಡಿಎಫ್ ಮತ್ತು ಬಿಜೆಪಿ ತಲಾ ಹತ್ತು ಸ್ಥಾನ ಪಡೆದಿದ್ದುವು. ಪ್ರಸ್ತುತ ಅದೇ ಫಲಿತಾಂಶ ಮುಂದುವರಿಕೆಯಾಗಿದೆ.

Post a Comment

0 Comments