ಮಂಗಳೂರು : ಗಮಕ ಕಲಾ ಪರಿಷತ್ತು ಮಂಗಳೂರು ತಾಲ್ಲೂಕು ವತಿಯಿಂದ 'ಅಧಿಕ ಮಾಸದ ಗಮಕ ಸಪ್ತಾಹ'ವನ್ನು ನಗರದ ವಿವಿಧ ದೇವಸ್ಥಾನಗಳಲ್ಲಿ ಏರ್ಪಡಿಸಲಾಗಿದೆ. ಅದರಂತೆ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಜರುಗಿದ ಸಪ್ತಾಹದ ಆರನೆಯ ದಿನ ಮೇ.29ರಂದು ಕವಿ ಕುಮಾರವ್ಯಾಸರ 'ಕರ್ನಾಟ ಭಾರತ ಕಥಾ ಮಂಜರಿ' ಯ 'ಸುಭದ್ರಾ ಕಲ್ಯಾಣ' ಕಥಾಭಾಗದ ಪುರಾಣ ಪ್ರವಚನ ನಡೆಯಿತು. ಯುವ ಗಮಕಿ ಮಧೂರು ರಾಮ ಪ್ರಕಾಶ ಕಲ್ಲೂರಾಯ ಕಾವ್ಯವಾಚನವನ್ನು ನೆರವೇರಿಸಿದರು. ಹೆಸರಾಂತ ಯಕ್ಷಗಾನ ಅರ್ಥಧಾರಿ - ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನಡೆಸಿಕೊಟ್ಟರು. ಹಿರಿಯ ಗಮಕಿ, ಗಮಕ ಕಲಾ ಪರಿಷತ್ತಿನ ನಿರ್ದೇಶಕ ಸುರೇಶ್ ರಾವ್ ಅತ್ತೂರು ಸ್ವಾಗತಿಸಿ, ಸ್ತುತಿ ಗೀತೆಯನ್ನು ಹಾಡಿದರು. ಬಹುಸಂಖ್ಯೆಯ ಕಲಾಭಿಮಾನಿಗಳು ಮತ್ತು ಗಮಕ ಕಲಾ ಪರಿಷತ್ತಿನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

0 Comments