ಯುಎಇ :  ದುಬೈಯ  ಸ್ಪೋರ್ಟ್ಸ್ ಬೇ  ಸ್ಪೋರ್ಟ್ಸ್ ಸ್ಕೂಲ್ ಅಬುಹೈಲ್ ನಲ್ಲಿ ಕರ್ನಾಟಕ  ಬ್ಯಾಡ್ಮಿಂಟನ್  ಫ್ರೆಂಡ್ಸ್ ಕ್ಲಬ್ ಯುಎಇ  ವತಿಯಿಂದ  ಆಯೋಜಿಸಲಾದ  ಕರ್ನಾಟಕ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್  ಯುಎಇ - 2026 ಸೀಸನ್ -1 ಟೂರ್ನಮೆಂಟ್ ಭಾರೀ ಯಶಸ್ಸು ಕಂಡು ಜನ ಮೆಚ್ಚುಗೆಗೆ ಪಾತ್ರವಾಯಿತು.

ಕೆ ಬಿ ಎಫ್ ಸಿ-ಯುಎಇ ಕೇವಲ 6 ಸದಸ್ಯರ  ಕನಸಿನಿಂದ ಆರಂಭವಾದ ಈ ಪ್ರಯತ್ನ ಇಂದು 16 ಸದಸ್ಯರ ಬಲಿಷ್ಠ ಸಮಿತಿಯಾಗಿ ಬೆಳೆದಿದೆ. ಈ ಪಂದ್ಯಾವಳಿಯಲ್ಲಿ ಮಕ್ಕಳು, ಮಹಿಳೆಯರು, ಪುರುಷರು  ಸೇರಿ ಸುಮಾರು 350+ ಕ್ರೀಡಾಪಟುಗಳು  13 ವಿಭಾಗಗಳಲ್ಲಿ ಭಾಗವಹಿಸಿದ್ದರು. 600ಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಆರಂಭಿಕ ಆಟಗಾರರಿಂದ ಹಿಡಿದು ಅನುಭವಿ ಆಟಗಾರರವರೆಗೆ ಪ್ರತಿಯೊಬ್ಬರೂ ಕ್ರೀಡಾ ಮನೋಭಾವದೊಂದಿಗೆ ಸ್ಪರ್ಧಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಸಂಘದ ಎಲ್ಲಾ 14 ಸದಸ್ಯರು ಹಾಜರಿದ್ದು  ಕ್ರೀಡೆಯ  ಉದ್ಘಾಟನೆಯನ್ನು ಅತಿಥಿಗಳಾದ  ದೀಪಕ್ ಎಸ್ ಪಿ, ವಿಶ್ವನಾಥ್ ಶೆಟ್ಟಿ, ಸಂದೀಪ್ ಕೋಟ್ಯಾನ್, ಅಶೋಕ್ ಕುಂದರ್ ಮತ್ತು ರಚನಾ ಕುಂದರ್ ಜತೆಗೂಡಿ  ನೆರವೇರಿಸಿದರು. ವಿಜೇತರಿಗೆ  ಅತ್ಯಾಕರ್ಷಕ ನಗದು, ಟ್ರೋಫಿ, ಮೆಡಲ್ ಮತ್ತು ಸರ್ಟಿಫಿಕೇಟ್  ಕೊಟ್ಟು ಗೌರವಿಸಲಾಯಿತು .ಸಮಾರೋಪ ಸಮಾರಂಭವನ್ನು ಮುಖ್ಯ ಪ್ರಾಯೋಜಕರಾದ ಪೇ ಟೆನ್ ಸಂಸ್ಥೆಯ ಗಣ್ಯರು ಮತ್ತು ಅತಿಥಿಗಳಾದ ಸರ್ವೋತ್ತಮ್ ಶೆಟ್ಟಿ, ದೀಪಕ್ ಎಸ್ ಪಿ, ಅಶೋಕ್ ಕುಂದರ್, ಸುಂದರ್ ಶೆಟ್ಟಿ, ಹಮೀದ್ ಸಾಥಿಕರ್ ನೆರವೇರಿಸಿದರು. ಸಂಘದ ಸದಸ್ಯರಾದ ಯೊಗೀಶ್, ವಿನೂತ್, ಅಶೋಕ್, ಜೀವನ್, ಮದು, ಆದರ್ಶ್, ಜೋಶ್ವ , ಮಿತ್ರಾಕ್ಷಿ, ಕ್ರೆಸ್, ರಚನಾ, ಅಲನ್, ಸುಪ್ರಾಜ್, ಅಜಿತ್, ವಿಜೇಶ್ ಉಪಸ್ಥಿತರಿದ್ದರು. ಜೋಶ್ವ ಮತ್ತು ನಿಕಿತಾ ಅವರು ಪಂದ್ಯಾವಳಿಯ ನಿರೂಪಕರಾಗಿ ಸಹಕರಿಸಿದರು. ಪ್ರಾಯೋಜಕರು , ಅತಿಥಿಗಳು , ತೀರ್ಪುಗಾರರು ಹಾಗೂ ಸಹಕರಿಸಿದ ಎಲ್ಲರಿಗೂ ಸ್ಮರಣಿಕೆಗಳನ್ನು ಕೊಟ್ಟು ಗೌರವಿಸಲಾಯಿತು.