Ticker

6/recent/ticker-posts

Ad Code

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬೇಟೆ ತೀವ್ರ; 1600 ಕ್ಕೂ ಹೆಚ್ಚು ಜನರ ಬಂಧನ : ಪ್ರತಿ ಪೊಲೀಸ್ ಠಾಣೆಗಳಲ್ಲಿ ನಾರ್ಕೋಟಿಕ್ ಸೆಲ್ ಕಾರ್ಯಾಚರಣೆ

ಕಾಸರಗೋಡು : ಜಿಲ್ಲೆಯಲ್ಲಿ ಮಾದಕ ವಸ್ತು ಮಾಫಿಯಾ ವಿರುದ್ಧ ವ್ಯಾಪಕ ಕ್ರಮಕ್ಕೆ ಪೋಲಿಸರು ಮುಂದಾಗಿದ್ದಾರೆ.  ಜಿಲ್ಲೆಯಾದ್ಯಂತ  ಎನ್‌ಡಿಪಿಎಸ್ ಮತ್ತು ಪಿಐಟಿ ಎನ್‌ಡಿಪಿಎಸ್ ಕಾಯ್ದೆಗಳ ಅಡಿಯಲ್ಲಿ ಪೊಲೀಸರು ಕಠಿಣ  ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು ಮಾದಕ ವಸ್ತುಗಳ ಕಳ್ಳಸಾಗಣೆ ಮಾಡಿದ 45 ಪ್ರಕರಣಗಳನ್ನು ಪತ್ತೆಹಚ್ಚಿದರು. 2025ರಲ್ಲಿ, 1224 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿವೆ. 1363 ಆರೋಪಿಗಳನ್ನು ಬಂಧಿಸಲಾಗಿದೆ. ಇವುಗಳಲ್ಲಿ 22 ಪ್ರಕರಣಗಳು ವಾಣಿಜ್ಯ ಪ್ರಮಾಣದವು, 50 ಮಧ್ಯಮ ಪ್ರಮಾಣದವು ಮತ್ತು 116 ಪ್ರಕರಣಗಳು ಸಣ್ಣ ಪ್ರಮಾಣದವು. ಉಳಿದ ಪ್ರಕರಣಗಳು ಮಾದಕ ವಸ್ತುಗಳ ಬಳಕೆಗೆ ಸಂಬಂಧಿಸಿದವು ಎಂದು ತಿಳಿದು ಬಂದಿದೆ.

Post a Comment

0 Comments