ಬದಿಯಡ್ಕ : ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಮೃತಪಟ್ಟಿದ್ದಾರೆ. ಮೃತರನ್ನು ಚಂಬಲ್ತಿಮಾರ್ ಸುಳ್ಯೋಡುವಿನ ಕೀರ್ತಿ ರಾಜ್ (39) ಎಂದು ಗುರುತಿಸಲಾಗಿದೆ. ಅವರು ಕರ್ನಾಟಕದ ಸುರತ್ಕಲ್ ನಲ್ಲಿ ಬಿಎಸ್ಎನ್ಎಲ್ ಉದ್ಯೋಗಿಯಾಗಿದ್ದಾರೆ. ಅಧಿಕ ರಕ್ತದೊತ್ತಡದಿಂದಾಗಿ ಅವರನ್ನು ಸುರತ್ಕಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಾರೋಗ್ಯ ಉಲ್ಬಣಗೊಂಡು ಅವರು ನಿಧನರಾದರು. ಅವಿವಾಹಿತರಾದ ಇವರು ಸದಾಶಿವ ಮತ್ತು ವನಿತಾ ದಂಪತಿಯ ಪುತ್ರ. ಸೂರ್ಯ ನಾರಾಯಣ ಇವರ ಏಕ ಸಹೋದರರಾಗಿದ್ದಾರೆ.

0 Comments