Ticker

6/recent/ticker-posts

Ad Code

ಕಾಸರಗೋಡಿನಲ್ಲಿ ತಳಮಟ್ಟದ ಬಂಟರ ಏಳಿಗೆಗಾಗಿ ಹೊಸ ಬಂಟ ಸಂಘಟನೆ ಆಸ್ತಿತ್ವಕ್ಕೆ ರೂಪುರೇಷೆ


ಮಂಜೇಶ್ವರ : ಕಾಸರಗೋಡಿನ ತಳಮಟ್ಟದ ಬಂಟರ ಏಳಿಗೆ ಮತ್ತು  ಬಂಟರ ಭವನ ನಿರ್ಮಾಣದ ಸದುದ್ದೇಶವನ್ನು ಮುಂದಿಟ್ಟುಕೊಂಡು ಮಹಾದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರ ನೇತೃತ್ವದಲ್ಲಿ ಸಮಾನ ಮನಸ್ಸಿನ ಬಂಟರು ಭಾಗಿಯಾಗಿ ಕಾಸರಗೋಡು ಬಂಟ ಸಮಾಜದ ಸರ್ವತೋಮುಖ ಏಳಿಗೆಯ ಬಗ್ಗೆ ತೀವ್ರ ಚರ್ಚೆ ನಡೆಯಿತು.ಸದಾಶಿವ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಅವರ ಹೊಸ ನಿವಾಸ ಶ್ರೀಲಿಲಾ ಸದನದಲ್ಲಿ ನಡೆದ ಸಭೆಯಲ್ಲಿ ಮಹತ್ವದ  ನಿರ್ಧಾರ ಮಾಡಲಾಯಿತು. ಸಭೆಯಲ್ಲಿ ಕಾಸರಗೋಡಿನ ನೂರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಕಾಸರಗೋಡು ಜಿಲ್ಲೆಯ ಸುಮಾರು ಹತ್ತಕ್ಕಿಂತ ಹೆಚ್ಚು ಪಂಚಾಯತಿನ ಬಂಟರ ಸಂಘದ ಅಧ್ಯಕ್ಷರು ಹಾಗೂ ಪ್ರದಾನ ಕಾರ್ಯದರ್ಶಿಗಳ ಸಹಿತ ವಿವಿಧ ಪದಾಧಿಕಾರಿಗಳು ಚರ್ಚೆಯಲ್ಲಿ  ಪಾಲ್ಗೊಂಡರು. ಈ ಸಭೆಯಲ್ಲಿ ಕಾಸರಗೋಡು ಮಾತೃಸಂಘದ ನೂತನ ಪದಾಧಿಕಾರಿ ವಸಂತ್ ರಾಜ್ ವರ್ಕಾಡಿ, ಸಮಾಜ ಸೇವಕಿ ಜಯಂತಿ ಟಿ.ಶೆಟ್ಟಿ,  ಮಿಂಜ ಪಂಚಾಯತ್ ಬಂಟರ ಸಂಘದ ಅಧ್ಯಕ್ಷ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ,ಹಾಗೂ ಮೀರಾ ಅಳ್ವಾ,ಸದಾಶಿವ ಶೆಟ್ಟಿ ಸೇವಾ ಸಮಿತಿ ಪಿ.ಅರ್.ಒ ಕಾರ್ತಿಕ್ ಶೆಟ್ಟಿ ಮಜಿಬೈಲ್, ರಾಜಕೀಯ ದುರೀಣ ಭಾಜಪ ಕೋಝಿಕ್ಕೋಡು ವಲಯ ಉಪಾಧ್ಯಕ್ಷ ವಿಜಯ್ ಕುಮಾರ್ ರೈ, ಬಾಜಪ ಮಂಗಲ್ಪಾಡಿ ಉತ್ತರ ವಲಯ ಅಧ್ಯಕ್ಷ ಭರತ್ ರೈ ಕೊಡಿಬೈಲ್, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಬ್ಲಾಕ್ ಪಂಚಾಯತ್ ಸದಸ್ಯ ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಅನ್ನಪೂರ್ಣ ರೈ ಕಿದೂರು, ಸುರೇಶ್ ಶೆಟ್ಟಿ ಮಹಾಲಿಂಗೇಶ್ವರ, ಪ್ರದೀಪ್ ಕುಟ್ಟ ಬಲ್ಲಂಗುಡೇಲ್, ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ, ಜಗದೀಶ್ ಮಾಸ್ಟರ್ ಎಲಿಯಾಣ ,
ಕುಂಬ್ಡಾಜೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಗಾಡಿಗುಡ್ಡೆ ,ಕುಳೂರು ಕನ್ಯಾನ ಚಂದ್ರಹಾಸ ಶೆಟ್ಟಿ, ದೇಲಂಪಾಡಿ ಬಂಟರ ಸಂಘದ ಅಧ್ಯಕ್ಷರು ಮೊದಲಾದ ಗಣ್ಯರು ಭಾಗವಹಿಸಿದರು. ನಾರಾಯಣ ನಾಯ್ಕ್ ನಡುಹಿತ್ಲು, ಸ್ವಾಗತಿಸಿ,, ಸದಾಶಿವ ಶೆಟ್ಟಿ ಸೇವಾಬಳಗ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಕುಳೂರು ಚಾರ್ಲ ವಂದಿಸಿದರು.

Post a Comment

0 Comments