Ticker

6/recent/ticker-posts

Ad Code

ಸೀತಾಂಗೋಳಿಯಲ್ಲಿ ಯುವಕನ ತಲೆಗೆ ಹೊಡೆದು ಕೊಂದ ಪ್ರಕರಣದಲ್ಲಿ ಇನ್ನೊರ್ವನ ಬಂಧನ


ಸೀತಾಂಗೋಳಿ : ಸೀತಾಂಗೋಳಿ ಬಿವರೇಜ್ ಔಟ್ಲೆಟ್ ಬಳಿ ಯುವಕನ ತಲೆಗೆ ಹೊಡೆದು ಕೊಂದ ಪ್ರಕರಣದಲ್ಲಿ ಇನ್ನೊರ್ವ ಆರೋಪಿಯನ್ನು ಬಂಧಿಸಲಾಗಿದೆ. ಸೀತಾಂಗೋಳಿ ಮದ್ಯದಂಗಡಿ ಬಳಿಯ ಕಟ್ಟಡವೊಂದರಲ್ಲಿ ಟೀ ಅಂಗಡಿ ನಡೆಸುತ್ತಿರುವ ಬದಿಯಡ್ಕ ನೆಕ್ರಾಜೆಯ ಅರುಣ್ ಕುಮಾರ್ (39) ಬಂಧಿತ ಆರೋಪಿ. ಪ್ರಕರಣದಲ್ಲಿ ಬಂಧನದಲ್ಲಿರುವ ನಾಯ್ಕಾಪುವಿನ ಶ್ರೀನಿವಾಸನನ್ನು ಕುಂಬಳೆ ಪೊಲೀಸರು ವಶಕ್ಕೆ ಪಡೆದು ಮತ್ತೆ ವಿಚಾರಣೆ ನಡೆಸಿದಾಗ, ಘಟನೆಯಲ್ಲಿ ಅರುಣ್ ಕುಮಾರ್ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. 
ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಏಪ್ರಿಲ್ 28 ರಂದು ನಡೆದಿತ್ತು. ಬಾಪಲಿಪ್ಪೋನ ಪಾಟ್ಲಡ್ಕದ ಉಪ್ಪಿ ಅಲಿಯಾಸ್ ಫಯಾತ್ (39) ಕೊಲೆಯಾದ. ಘಟನೆಗೆ ಒಂದು ದಿನ ಮೊದಲು ಎರಡು ಗುಂಪುಗಳು ಘರ್ಷಣೆ ನಡೆಸಿದ್ದವು. ಘಟನೆಯ ದಿನದಂದು ಫಯತ್‌ಗೆ ಮತ್ತೊಬ್ಬ ಸ್ನೇಹಿತ ಕರೆ ಮಾಡಿ ಒಟ್ಟಿಗೆ ಕುಡಿದ ನಂತರ ಜನ ವಾಸ ಇಲ್ಲದ ಕಟ್ಟಡದಲ್ಲಿ ಮಲಗಿದ್ದಾಗ ಶ್ರೀನಿವಾಸ ಕೋಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಗೆ ಬಳಸಿದ ಕೋಲನ್ನು ಅರುಣ್ ಕುಮಾರ್ ನೀಡಿದ್ದಾಗಿ ಶ್ರೀನಿವಾಸ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕುಂಬಳೆ ಪೊಲೀಸರು ಅರುಣ್‌ನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿಯು ಕೂಡ ಶಾಮೀಲಾಗಿರುವುದಾಗಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments