Ticker

6/recent/ticker-posts

Ad Code

ಗಾಳಿ ಮಳೆಗೆ ಮರ ವಿದ್ಯುತ್ ಕಂಬ ಸಹಿತ ಕಾರಿಗೆ ಬಿದ್ದು ತೀವ್ರ ಹಾನಿ : ಪೆರ್ಲದ ವೈದ್ಯರು ಕೂದಲೆಲೆಯ ಅಂತರದಲ್ಲಿ ಬಚಾವ್


 ಪೆರ್ಲ : ಬಾಡೂರು -ಪೆರ್ಲ   ರಸ್ತೆಯಲ್ಲಿ ಇಂದು   ಸಂಜೆ ಬೀಸಿದ ಬೇಸಿಗೆಯ ಅಕಾಲಿಕ ಗಾಳಿ ಮಳೆಗೆ ಮಣಿಯಂಪಾರೆ ಮಸೀದಿ ಬಳಿ ಮರವೊಂದು ಮುರಿದು ವಿದ್ಯುತ್ ಕಂಬ ಸಹಿತ ಧರೆಗುರುಳಿದ್ದು ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದರ ಮೇಲೆ ಬಿದ್ದಿದ್ದು ಕಾರು ಚಲಾಯಿಸುತ್ತಿದ್ದ ಪೆರ್ಲದ ವೈದ್ಯರೋರ್ವರು ಅದೃಷ್ಠವಶಾತ್ ಭಾರೀ ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ. ಸೀತಾಂಗೋಳಿ ಹಾಗೂ ಬಾಡೂರುಪದವಿನಲ್ಲಿ ಕ್ಲಿಬಿಕ್ ನಡೆಸುತ್ತಿದ್ದ ಈ ವೈದ್ಯರು ಇಂದು ಸಂಜೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ನಿಮಿತ್ತ ಬೇಗನೇ ಕ್ಲಿನಿಕ್ ಮುಚ್ಚಿ ಸಂಚರಿಸುತ್ತಿದ್ದರು ಎನ್ನಲಾಗಿದೆ. ರಸ್ತೆಯ ಉದ್ದಗಲಕ್ಕೂ ವಿದ್ಯುತ್ ಕಂಬದಿಂದ ತಂತಿಗಳು ಕಡಿದು ಬಿದ್ದಿದ್ದು ಸ್ಥಳೀಯರು ಸಕಾಲಿಕ ಕಾರ್ಯಚರಣೆಯಲ್ಲಿ ನೆರವಾದರು.

Post a Comment

0 Comments