Ticker

6/recent/ticker-posts

Ad Code

ಸೀತಾಂಗೋಳಿ ಕೊಲೆ ನಡೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಆರೋಪಿಯ ಬಂಧನ

 

ಕುಂಬಳೆ : ಸೀತಾಂಗೋಳಿಯಲ್ಲಿ ಮಂಗಳವಾರ ಮಧ್ಯಾಹ್ನ ಹಾಡಹಗಲೇ ಯುವಕನ ತಲೆಗೆ ಹೊಡೆದು ಕೊಂದ ಪ್ರಕರಣದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಕುಂಬಳೆ ಪೋಲಿಸರು ಬಂಧಿಸಿದರು. ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು. ಕೆ. ಜೋಸ್, ಎಸ್‌ಐಗಳಾದ ಸಿ. ಸನಿತ್ ಮತ್ತು ಅನಂತಕೃಷ್ಣನ್ ಆರ್. ಮೆನನ್ ಅವರ ನೇತೃತ್ವದಲ್ಲಿ ಕುಂಬಳೆ ಸಮೀಪದ ನಾಯ್ಕಾಪುನ  ಶ್ರೀನಿವಾಸ (39) ಎಂಬಾತನನ್ನು ಈ ಕೊಲೆಗೆ ಸಂಬಂಧಿಸಿ ಬಂಧಿಸಲಾಗಿದೆ. ಶ್ರೀನಿವಾಸ, ಕುಡಿದ ಮತ್ತಿನಲ್ಲಿ ನಡೆದ ಜಗಳವೇ ಕೊಲೆಗೆ ಕಾರಣ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕುಂಟಿಕ್ಕಾನ ಸಮೀಪದ ಬಾಪಾಲಿಪ್ಪೋನಂ  ಸಫಾಹಿದ್ ಅಲಿಯಾಸ್ ಶಫಾಯತ್ (35) ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೀತಾಂಗೋಳಿ ಬಿವರೇಜ್  ಅಂಗಡಿಯ ಬಳಿಯ ಕಟ್ಟಡದ ಹಿಂಭಾಗದಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಾಹಿತಿ ಪಡೆದ ಕುಂಬಳೆ ಪೊಲೀಸರು ಮತ್ತು ಸಂಬಂಧಿಕರು ಸ್ಥಳಕ್ಕೆ ಆಗಮಿಸಿದರು. ಪ್ರಾಥಮಿಕ ಪರೀಕ್ಷೆಯ ನಂತರ ಪೊಲೀಸರು ಇದು ಕೊಲೆ ಎಂದು ತೀರ್ಮಾನಿಸಿದ್ದರು.  ಕೊಲೆಗೆ ಬಳಸಲಾದ ಮರದ ಕೋಲು ರಕ್ತದ ಕಲೆಗಳಿಂದ ಕೂಡಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಹಲವರನ್ನು ವಿಚಾರಣೆಗೊಳಪಡಿಸಿ ಆರೋಪಿಯನ್ನು ಬಂಧಿಸಲಾಯಿತು.

Post a Comment

0 Comments