ಕಾಸರಗೋಡು : ವೈವಿಧ್ಯಮಯ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಮನ ಸೆಳೆದ ಸವಿಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಇದರ ವಿನೂತನ ಕಾರ್ಯಕ್ರಮ ಬಹುಭಾಷಾ ಕವಿ ಸಂಗಮ ಮತ್ತು ಪುಸ್ತಕ ಸಮರ್ಪಣೆ ಕಣ್ಣೂರು ಜಿಲ್ಲೆಯ ಚೆರುಪುಳ ಸಮೀಪದ ನವಪುರಂ ಜಾತ್ಯಾತೀತ ಪುಸ್ತಕ ದೇವಾಲಯದಲ್ಲಿ ಜರಗಿತು.
ಪೆರ್ಲದಿಂದ ಹೊರಟ ಕಾಸರಗೋಡು ಜಿಲ್ಲೆಯ ಮೂವತ್ತೈದು ಮಂದಿ ಸಾಹಿತಿ ಕಲಾವಿದರ ತಂಡ ಸಾಹಿತ್ಯಯಾತ್ರೆಯ ಮೂಲಕ ನವಪುರಕ್ಕೆ ತಲುಪಿ ಅಕ್ಷರೋತ್ಸವದಲ್ಲಿ ಭಾಗವಹಿಸಿದರು. ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ಅವರ ಸಾರಥ್ಯದಲ್ಲಿ ಸಂಯೋಜಿಸ್ಫಟ್ಟ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತರು ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನವಪುರಂ ದೇವಾಲಯದ ಸ್ಥಾಪಕರು ಹಾಗೂ ವ್ಯವಸ್ಥಾಪಕರಾದ ಪ್ರಾಪೊಯಿಲ್ ನಾರಾಯಣನ್ ಮಾಸ್ಟರ್ ವಹಿಸಿದ್ದರು. ಪ್ರಸಿದ್ಧ ಸಾಹಿತಿ ಪಿ.ಕೆ ಗೋಪಿ ಉದ್ಘಾಟಿಸಿದರು. ಹಿರಿಯಕವಿ ಸಾಹಿತಿ ಪತ್ರಕರ್ತ ರಾಧಾಕೃಷ್ಣ. ಕೆ ಉಳಿಯತ್ತಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸುಳ್ಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಅಶ್ವಿನಿ ಕೊಡಿಬೈಲು, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಾನಂದ ಪೆರಾಜೆ ಉಪಸ್ಥಿತರಿದ್ದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತು ಅಧ್ಯಕ್ಷ, ಸಾಹಿತಿ, ಹರೀಶ್ ಸುಲಾಯ ಒಡ್ಡಂಬೆಟ್ಟು ಮತ್ತು ಕವಯತ್ರಿ, ಪ್ರಾಧ್ಯಾಪಕಿ ಡಾ. ಆರ್ಯಗೋಪಿನಾಥ್ ಅವರಿಗೆ ನವಪುರಂ ದೇವಾಲಯದ ದ್ರಾವಿಡ ಭಾಷಾ ಸಾಹಿತ್ಯ ಪುರಸ್ಕಾರ ನೀಡಲಾಯಿತು. ಸಾಹಿತಿ ಪಿ. ಕೆ ಗೋಪಿ ಪುರಸ್ಕಾರ ಪ್ರದಾನ ಮಾಡಿದರು. ಸವಿ ಹೃದಯದ ಕವಿ ಮಿತ್ರರು ಬಳಗದ ವಿಶೇಷಾಹ್ವಾನಿತರಾದ ಜಯಾನಂದ ಪೆರಾಜೆ, ದಿನೇಶ್ ಕುಂದರ್ ಬಿಳಿನೆಲೆ, ಜೋತ್ಸ್ನಾ ಕಡಂದೇಲು, ಗಣೇಶ್ ಆಚಾರ್ಯ ಅಡ್ಯನಡ್ಕ, ಅನುರಾಧ ರಾಜೀವ್ ಸುರತ್ಕಲ್ ಮೊದಲಾದವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಅನುರಾಧ ರಾಜೀವ್ ಸುರತ್ಕಲ್ ಪ್ರಾರ್ಥನೆ ಹಾಡಿದರು. ನವಪುರಂ ಕಾರ್ಯದರ್ಶಿ ಸಾಬು ಮೊಳಯೆಕಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ವಂದಿಸಿದರು. ಸುಶೀಲ ಪದ್ಯಾಣ ಮತ್ತು ಹರ್ಷಿತಾ ಪೆರ್ಲ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯ, ಕೊಳಲುವಾದನ ಗಮನ ಸೆಳೆಯಿತು. ಸಾಹಿತಿ ಕಲಾವಿದ ವೆಂಕಟ ಭಟ್ ಎಡನೀರು ಅವರು ಭಾವಾಭಿನಯದ ಮೂಲಕ ರಂಜಿಸಿದರು.
ಸಭಾಕಾರ್ಯಕ್ರಮಕ್ಕೆ ಮೊದಲು ಅತಿಥಿ ಅಭ್ಯಾಗತರನ್ನು ಹಾಗೂ ಬಹುಭಾಷಾ ಸಾಹಿತಿಗಳನ್ನು ನವಪುರಂ ಪದಾಧಿಕಾರಿಗಳು ವರ್ಣರಂಜಿತ ಮೆರವಣಿಗೆಯೊಂದಿಗೆ ಸ್ವಾಗತಿಸಿದರು. ನವಪುರಂ ಮಾರ್ಗದರ್ಶಕ ಫಲಕವನ್ನು ಪಿ. ಕೆ ಗೋಪಿ, ರಾಧಾಕೃಷ್ಣ ಉಳಿಯತ್ತಡ್ಕ, ಸುಭಾಷ್ ಪೆರ್ಲ, ಪ್ರಾಪೊಯಿಲ್ ನಾರಾಯಣನ್ ಮಾಸ್ಟರ್ ಅನಾವರಣಗೊಳಿಸಿದರು.

0 Comments