Ticker

6/recent/ticker-posts

Ad Code

ಪೆರಡಾಲ ದೇವಸ್ಥಾನದ ವರ್ಷಾವಧಿ ಜಾತ್ರೆ ಸಂಪನ್ನ


 ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಜಾತ್ರೆ ಮಂಗಳವಾರ ಸಮಾಪನಗೊಂಡಿತು. ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳು ಜರಗಿತು. ಏಪ್ರಿಲ್ 17ರಂದು ಹಸಿರುವಾಣಿ ಮೆರವಣಿಗೆಯೊಂದಿಗೆ ಬ್ರಹ್ಮಕಲಶೋತ್ಸವ ಆರಂಭವಾಗಿದ್ದು ಏ.28ರಂದು ಶ್ರೀ ದೇವರ ಉತ್ಸವ, ರಾಜಾಂಗಣ ಪ್ರಸಾದ, ಶ್ರೀ ಪಿಲಿಚಾಮುಂಡಿ ದೈವದ ನರ್ತನ, ಅರಸಿನ ಹುಡಿ ಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಊರ ಪರವೂರ ಭಗವದ್ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಒಟ್ಟು 12 ದಿನಗಳ ಕಾಲ ಪೆರಡಾಲ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಾಡಿನ ಅನೇಕ ಗಣ್ಯರು, ಯತಿವರ್ಯರು ಪಾಲ್ಗೊಂಡ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಜರಗಿತ್ತು.

Post a Comment

0 Comments