Ticker

6/recent/ticker-posts

Ad Code

ಮೂತ್ರ ಪಿಂಡ ವೈಫಲ್ಯಕ್ಕೊಳಗಾಗಿ ಯುವಕ ಮೃತ್ಯು

 


ಪೆರ್ಲ : ಮೂತ್ರ ಪಿಂಡ ವೈಪಲ್ಯಕ್ಕೊಳಗಾಗಿ ಯುವಕನೋರ್ವ  ಮೃತಪಟ್ಟ ಘಟನೆ ವರದಿಯಾಗಿದೆ.   ಮೂಲತಃ ಶೇಣಿ ಸಮೀಪದ ಕೆ.ಕೆ.ಕಾಡು ನಿವಾಸಿಯಾಗಿದ್ದು ಇದೀಗ  ಮಣಿಯಂಪಾರೆಯಲ್ಲಿ ವಾಸಿಸುತ್ತಿರುವ (ಬ್ಯಾಪಿಸ್ಟ್) ಬಲ್ತೀಸ್ ಡಿಸೋಜರ ಪುತ್ರ ಧನರಾಜ್ ಡಿಸೋಜ (30) ಮೃತ ಯುವಕ. ಕಳೆದ ಹಲವು ವರ್ಷಗಳಿಂದ ಕಿಡ್ನಿ‌ವೈಪಲ್ಯದಿಂದ ಬಳಲುತ್ತಿದ್ದ ಇವರಿಗೆ ಈ ನಡುವೆ ದಾನಿಗಳ ಸಹಾಯ ಕೋರಿ ಕಿಡ್ನಿ ಬದಲಾಯಿಸುವ ಚಿಕಿತ್ಸೆ ನಡೆಸಲಾಗಿತ್ತು. ಈ ನಡುವೆ ಇದೀಗ ನಿನ್ನೆ ಸಂಜೆ ತೀವ್ರ ಅಸೌಖ್ಯಕ್ಕೊಳಗಾದ ಇವರನ್ನು ಕುಂಬಳೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿತ್ತು.

ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರು ಮಣಿಯಂಪಾರೆ ಸೈಂಟ್ ಲಾರೆನ್ಸ್ ಚರ್ಚಿನ ಐಸಿವೈಎಂ ಸಂಘಟನೆ ಹಾಗೂ ಕೆಥೋಲಿಕ್ ಸಭಾಗಳಲ್ಲಿ ಸಕ್ರಿಯರಾಗಿ ದುಡಿದಿದ್ದರು.ಅವಿವಾಹಿತರಾದ ಇವರು ತಾಯಿ ಐರಿನ್, ಸಹೋದರ ದೀಪಕ್ (ಗಲ್ಫ್ ಉದ್ಯೋಗಿ),ಸಹೋದರಿ ದಿವ್ಯ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.


                                                                             ಜಾಹೀರಾತು



Post a Comment

0 Comments