ಕುಂಬಳೆ : ಶಾಂತಿಪಳ್ಳದಲ್ಲಿ ಕಾರು-ಬಸ್ ಡಿಕ್ಕಿಯಲ್ಲಿ ನಾಲ್ವರು ಕಾರು ಪ್ರಯಾಣಿಕರು ಮತ್ತು ಎಂಟು ಬಸ್ ಪ್ರಯಾಣಿಕರು ಗಾಯಗೊಂಡಿದ್ದಾರೆ. ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಬದಿಯಡ್ಕದ ಮಲಿಕ್, ತಾಜಿದ್, ಕಬೀರ್ ಮತ್ತು ಜಿಡಾನ್ ಗಾಯಗೊಂಡಿದ್ದಾರೆ. ಜಿಡಾನ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡು ವಿಂಟೆಕ್ ಆಸ್ಪತ್ರೆಯ ಡಾ. ಮುಸ್ಕನಾ, ಕಂಚಿಕಟ್ಟೆಯ ಸುಜಾತಾ (40) ಮತ್ತು ಸೂರಂಬೈಲ್ ನಿವಾಸಿ ಮತ್ತು ಕುಂಜತ್ತೂರು ಶಾಲೆಯ ಶಿಕ್ಷಕಿ ದೀಪ್ತಿ (22) ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ. ಬದಿಯಡ್ಕದಿಂದ ಬರುತ್ತಿದ್ದ ಖಾಸಗೀ ಬಸ್ ಮತ್ತು ಕಾರು ಅಪಘಾತಕ್ಕೀಡಾಗಿದ್ದು, ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಕಾರಿನ ಒಂದು ಭಾಗವನ್ನು ತೆಗೆದು ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

0 Comments