Ticker

6/recent/ticker-posts

Ad Code

ಹೆರಿಗೆಯ ಬಳಿಕ ಗಂಭೀರ ರಕ್ತಸ್ರಾವದಿಂದ ಗೃಹಿಣಿ ಮೃತ್ಯು

 

ಬದಿಯಡ್ಕ: ಹೆರಿಗೆಯ ಬಳಿಕ ಗಂಭೀರ ರಕ್ತಸ್ರಾವಕ್ಕೆ ಒಳಗಾದ ಗೃಹಿಣಿಯೊಬ್ಬರು ಸಾವಿಗೀಡಾದ ಘಟನೆ ನಡೆದಿದೆ. ಕುಂಬ್ಡಾಜೆ ತೆಕ್ಕೆಮೂಲೆಯ ಕುಂಞಿಕಣ್ಣ ಮಣಿಯಾಣಿ ಎಂಬವರ ಪುತ್ರಿ ಕೇರಳ ಸರಕಾರದ ಸಹಕಾರಿ ಇಲಾಖೆಯ ಹಿರಿಯ ಆಡಿಟರ್  ಆಗಿರುವ ನಳಿನಾಕ್ಷಿ (38 ) ಮೃತ ಮಹಿಳೆಯಾಗಿದ್ದಾರೆ.

ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ತೀವ್ರ ರಕ್ತಸ್ರಾವದಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.   ಮೃತರು ಹೆತ್ತ ನವಜಾತ ಶಿಶು ಸಹಿತ ಪತಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Post a Comment

0 Comments