ತಿರುವನಂತಪುರ : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದು ತನ್ನ ಪ್ರಾಬಲ್ಯ ಮೆರೆದಿದೆ. ರಾಜೀವ್ ಚಂದ್ರಶೇಖರ್ ಅವರು ಸಚಿವ ಶಿವನ್ ಕುಟ್ಟಿ ಅವರನ್ನು ಸೋಲಿಸುವ ಮೂಲಕ ನೇಮಂನಲ್ಲಿ, ವಿ ಮುರಳೀಧರನ್ ಅವರು ಕಡಕಂಪಳ್ಳಿ ಸುರೇಂದ್ರನ್ ಅವರನ್ನು ಸೋಲಿಸುವ ಮೂಲಕ ಕಜಕೂಟಂನಲ್ಲಿ ಮತ್ತು ಬಿ.ಬಿ. ಗೋಪಕುಮಾರ್ ಚತ್ತನ್ನೂರಿನಲ್ಲಿ ಗೆಲುವು ಸಾಧಿಸಿದ್ದಾರೆ.
ಈ ಹಿಂದೆ ಒ. ರಾಜಗೋಪಾಲ್ 2016 ರ ಚುನಾವಣೆಯಲ್ಲಿ ನೇಮಂನಿಂದ ಆಯ್ಕೆಯಾಗಿದ್ದರು. 2021 ರಲ್ಲಿ, ನೇಮಂ ನಲ್ಲಿ ಬಿಜೆಪಿಗೆ ಸೋಲಾಯಿತು. ಇದೀಗ ಈ ಬಾರಿಯ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವು ತನ್ನ ಶಕ್ತಿಯನ್ನು ತೋರಿಸಿದೆ.

0 Comments