ಚಿತ್ರ ಶ್ರೀಕಾಂತ್ ಕಾಸರಗೋಡು
ಕಾಸರಗೋಡು : ಹುತಾತ್ಮರ ನಾಡು ಕಯ್ಯೂರು ಮತ್ತು ಚೀಮೇನಿಯನ್ನು ಒಳಗೊಂಡಿರುವ ತ್ರಿಕರಿಪುರ ವಿಧಾನಸಭಾ ಕ್ಷೇತ್ರವನ್ನು ಯುಡಿಎಫ್ ವಶಪಡಿಸಿಕೊಂಡಿದ್ದು, ಭರ್ಜರಿ ಗೆಲುವು ಕಂಡಿದೆ. ಯುಡಿಎಫ್ ಅಭ್ಯರ್ಥಿ ಸಂದೀಪ್ ವಾರಿಯರ್ ಅವರು ಕಾಸರಗೋಡು ಜಿಲ್ಲೆಯಲ್ಲಿ ನಡೆದ ಚೊಚ್ಚಲ ಚುನಾವಣೆಯಲ್ಲಿ ಸಿಪಿಎಂನ ವಿಪಿಪಿ ಮುಸ್ತಫಾ ಅವರನ್ನು ನಾಲ್ಕು ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ಜಯಗಳಿಸಿದ್ದಾರೆ.
ಕ್ಷೇತ್ರ ರಚನೆಯಾದ ನಂತರ ತ್ರಿಕರಿಪುರ ಕ್ಷೇತ್ರವು ಸಿಪಿಎಂಗೆ ಸೋತಿರುವುದು ಇದೇ ಮೊದಲು. ಕಾಂಗ್ರೆಸ್ ಪರ ಅಭ್ಯರ್ಥಿಗಳ ನಿರ್ಣಯ ಅತಂತ್ರ ಸ್ಥಿತಿಯಲ್ಲಿರುವಾಗ ಸಂದೀಪ್ ವಾರಿಯರ್ ತ್ರಿಕರಿಪುರ ಕ್ಷೇತ್ರದ ಗೋಧಾದಿಂದ ಸ್ಪರ್ಧಿಸಿ ಇದೀಗ ಜಯ ಗಳಿಸಿದ್ದಾರೆ.

0 Comments