ಬದಿಯಡ್ಕ : ಮೆಥಾಂಫೆಟಾಮೈನ್ ಹೊಂದಿದ್ದ ಯುವಕನೋರ್ವನನ್ನು ಅಬಕಾರಿ ದಳ ಬಂಧಿಸಿದೆ. ಬಂಧಿತ ವ್ಯಕ್ತಿ ಕರ್ಮಂತ್ತೋಡಿ ನಿವಾಸಿ ಮುಸಲ್ ಹಕೀಮ್ (28) ಎಂದು ಗುರುತಿಸಲಾಗಿದೆ.
ಈತನ ಬಳಿ ಇದ್ದ 5.612 ಗ್ರಾಂ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ. ಬದಿಯಡ್ಕ ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ಪಿ.ಆರ್. ಜಿಷ್ಣು ಮತ್ತು ಅವರ ತಂಡ ಕರ್ಮಂತ್ತೋಡಿಯಲ್ಲಿ ನಡೆಸಿದ ಶೋಧದ ವೇಳೆ ಆತನನ್ನು ಬಂಧಿಸಲಾಗಿದೆ. ನಾಗರಿಕ ಅಬಕಾರಿ ಅಧಿಕಾರಿಗಳಾದ ಎ. ಕೃಷ್ಣ, ಎಂ.ಎ. ಪ್ರಭಾಕರನ್, ಪಿ. ಸದಾನಂದನ್, ಎನ್. ಜನಾರ್ದನನ್, ಆರ್. ಲಿಜಿನ್, ಟಿ. ಧನ್ಯ ಮತ್ತು ಚಾಲಕ ಎಸ್.ಜಿ. ಸಾಗರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

0 Comments