Ticker

6/recent/ticker-posts

Ad Code

ಇಲಿ ವಿಷ ತಿಂದು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತ್ಯು

 

ಬದಿಯಡ್ಕ: ಇಲಿ ವಿಷ ತಿಂದು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತ್ಯು.  ಕುಂಬ್ಡಾಜೆ  ಸಮೀಪದ ಉಬ್ರಂಗಳ ಪಡುಮೂ ನಿವಾಸಿ ಅಕ್ಷಿತ್ ಕುಮಾರ್ (21) ಮೃತ ಯುವಕ. ಈ ತಿಂಗಳ 6 ರಂದು ವಿಷ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದ ಅಕ್ಷಿತ್ ಕುಮಾರ್ ನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅಲ್ಲಿ ಅವರ ಸ್ಥಿತಿ ಗಂಭೀರವಾದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆಯ ನಡುವೆ ನಿನ್ನೆ (ಗುರುವಾರ) ಮಧ್ಯಾಹ್ನ ನಿಧನರಾದರು. 

 ಬಾಲಕೃಷ್ಣ  ಮತ್ತು ಶಶಿಕಲಾ ದಂಪತಿಯ ಪುತ್ರ ಅಕ್ಷಿತ್ ಕಾಸರಗೋಡಿನ ಖಾಸಗಿ ಸಂಸ್ಥೆಯಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ.  ಗೀತಾಂಜಲಿ ಮತ್ತು ಅವಿನಾಶ್ ಅವರ ಸಹೋದರಿ, ಸಹೋದರರಾಗಿದ್ದಾರೆ. ವಿಷ ಪ್ರಾಶನಕ್ಕೆ ಕಾರಣ ತಿಳಿದು ಬಂದಿಲ್ಲ.

Post a Comment

0 Comments