ನೀರ್ಚಾಲು : ಅಸೌಖ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾದ ಮಾನ್ಯ ಶಾಲೆ ಬಳಿ ನಾರಾಯಣನ್ (50) ನಿಧನ ಹೊಂದಿದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಹಲವು ಸಮಯಗಳಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ದಿನ ಅನಾರೋಗ್ಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಶಾಂತಾ. ಮಕ್ಕಳಾದ ನಂದನಾ, ಅಮೃತಾ ಮತ್ತು ಅಭಿಜಿತ್. ಅಳಿಯ ನಯನ್ (ಮಲ್ಲಂ ಚತ್ತಪ್ಪಾಡಿ) ಮತ್ತು ಅಖಿಲೇಶ್ ತಚಂಗಾಡ್ (ಯುವ ಕಾಂಗ್ರೆಸ್ ಪಳ್ಳಿಕ್ಕರ ಮಂಡಲ ಅಧ್ಯಕ್ಷ). ಸಹೋದರಿಯರಾದ ಸುಶೀಲಾ ಮತ್ತು ವಸಂತಿ ಎಂಬಿವರನ್ನಗಲಿದ್ದಾರೆ.

0 Comments