Ticker

6/recent/ticker-posts

Ad Code

ಎನ್ ಡಿಎ ಯ ಅಭ್ಯರ್ಥಿ ಕೆ.ಸುರೇಂದ್ರನ್ ಗೆ ಎದುರಾಗಿ ಅರುವಿಯೋಡ್ ಸುರೇಂದ್ರನ್ ಸಮನಾಮ ಅಭ್ಯರ್ಥಿ ಕಣಕ್ಕೆ : ಕಾಂಗ್ರೆಸ್ ನ ನೀಚ ರಾಜಕೀಯ ಆರೋಪ

 


ಕುಂಬಳೆ : ಎನ್ ಡಿ ಎ ಯೊಡನೆ ನೇರ ಸೆಣಸಾಟದ ಅಂಜಿಕೆಯಿಂದ ಸಾಮ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ನೀಚ ರಾಜಕೀಯ ನೀತಿ ಎತ್ತಿ ತೋರಿಸಿದೆ ಎಂದು ಕೆ.ಸುರೇಂದ್ರನ್ ಆರೋಪಿಸಿದರು. ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಇದೀಗ  ಕೊನೆಯ ಕ್ಷಣದಲ್ಲಿ ತಿರುವನಂತಪುರದ ಕಾಂಗ್ರೆಸ್ ನ‌ ಪ್ರಮುಖ  ನೇತಾರೋರ್ವರನ್ನು ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯನ್ನಾಗಿಸುವ ಮೂಲಕ ನೀಚ ರಾಜಕೀಯಕ್ಕೆ ಕಾಂಗ ಮುಂದಾಗಿದೆ ಎಂದು ಕೆ.ಸುರೇಂದ್ರನ್ ತಿಳಿಸಿದರು. ಅವರು ಆರಿಕ್ಕಾಡಿ ಪೂಕಟ್ಟೆಯಲ್ಲಿ ಸುದ್ದಿಗಾರರೊಡನೆ ಮಾತನಾಡುತ್ತಾ ಈ ವಿಷಯ ಸ್ಪಷ್ಟಪಡಿಸಿದರು. ತಿರುವನಂತಪುರದ ಅರುವಿಯೋಡ್ ಸುರೇಂದ್ರನ್ ಈ ಹಿಂದೆ  ಉಲಮಯಕಲ್ ಗ್ರಾಮ ಪಂಚಾಯತ್ 

ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿದ್ದು ಇದೀಗ   ಮಂಜೇಶ್ವರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ನ ಕಾಣದ ಕೈ ಪ್ರವರ್ತಿಸಿದೆ. ಆದರೆ ಜನ ಪಕ್ಷದ ಅಭಿಮಾನಿಗಳು ಈ ಬಾರಿ ತಾವರೆ ಚಿಹ್ನೆಯನ್ನು ಮಾತ್ರ ಆಯ್ಕೆಯಾಗಿಸುವುದರಲ್ಲಿ ಸಂಶಯವಿಲ್ಲ ಎಂದು ಕೆ.ಸುರೇಂದ್ರನ್ ಅಭಿಪ್ರಾಯಪಟ್ಟರು.

Post a Comment

0 Comments